ಮನೆ ಪಕ್ಕದ ಶೆಡ್ ನಲ್ಲಿ ಬಿಟ್ಟಿದ್ದ ಅಪಾರ ಮೌಲ್ಯದ ಎಚ್ ಎಫ್ ಸೀಮೆ ಹಸು ಹಾಗೂ ಜರ್ಸಿ ಹಸುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಈ ಘಟನೆ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದಲ್ಲಿ ಸೆ.14ರ ರಾತ್ರಿ ನಡೆದಿದೆ. ಈ ಕುರಿತು ಅ.04ರಂದು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನಾನು ಹೈನುಗಾರಿಕೆ ಮತ್ತು ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿರುತ್ತೇನೆ. ನಾನು ಜೀವನೋಪಾಯಕ್ಕಾಗಿ ಒಂದು HF ಸೀಮೆ ಹಸು ಮತ್ತು ಜರ್ಸಿ ಹಸುಗಳನ್ನು ಸಾಕಿಕೊಂಡಿರುತ್ತೇನೆ. ನಮ್ಮ ಮನೆ ಪಕ್ಕದಲ್ಲಿರುವ ಹಸುಗಳನ್ನು ಕಟ್ಟಿ ಹಾಕುವ ಶೆಡ್ ನಲ್ಲಿ ಎಚ್ ಎಫ್ ಸೀಮೆ ಹಸು ಹಾಗೂ ಜರ್ಸಿ ಹಸುಗಳನ್ನು ಕಟ್ಟಿ ಹಾಕಿ ಮನೆಗೆ ಬರಲಾಗಿತ್ತು. ದಿನಾಂಕ 14/09/2024 ರಂದು ಬೆಳಗಿನ ಜಾವ 2-00 ಗಂಟೆ ಸಮಯದಲ್ಲಿ ನಾನು ದನದ ಶೆಡ್ಡಿಗೆ ಹೋಗಿ ನೋಡಿದಾಗ ನಮ್ಮ ಹಸುಗಳು ಶೆಡ್ಡಿನಲ್ಲಿ ಇರಲಿಲ್ಲ, ಯಾರೋ ಕಳ್ಳರು ನಾವು ಶೆಡ್ ನ ಬೀಗ ಹಾಕದೇ ಇರುವುದನ್ನು ಗಮನಿಸಿ ಶೆಡ್ ಗೆ ನುಗ್ಗಿ, ಶೆಡ್ ನಲ್ಲಿದ್ದ 80 ಸಾವಿರ ರೂ. ಮೌಲ್ಯದ HF ಸೀಮೆ ಹಸು ಮತ್ತು 60 ಸಾವಿರ ರೂ. ಮೌಲ್ಯದ ಜೆರ್ಸಿ ಸೀಮೆ ಹಸುಗಳು ಕಾಣೆಯಾಗಿರುವುದು ಕಂಡುಬಂದಿದೆ. ಎರಡು ಹಸುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಾವು ಎಲ್ಲ ಕಡೆ ಹುಡುಕಾಡಿದ್ದರೂ ಸಿಗದ ಕಾರಣ ಅ.4ರಂದು ದೊಡ್ಡಬೆಳವಂಗಲ ಠಾಣೆಗೆ ದೂರು ನೀಡಲಾಗಿದೆ ಎಂದು ಹಸುಗಳ ಮಾಲೀಕರು ತಿಳಿಸಿದ್ದಾರೆ.
HF ಹಸು ಬಿಳಿ ಮತ್ತು ಕಪ್ಪು ಬಣ್ಣದಾಗಿದ್ದು, ಜೆರ್ಸಿ ಹಸು ಕಪ್ಪು ಬಣ್ಣದಾಗಿರುತ್ತೆ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ…
ಬೆಂಗಳೂರು ಗ್ರಾಮಾಂತರ: ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ದೊಡ್ಡಬಳ್ಳಾಪುರ ತಾಲೂಕು ಇದೀಗ ಬರಪೀಡಿತ ತಾಲೂಕುಗಳ ಪಟ್ಟಿಗೆ…
ಧಾರವಾಡ: ಭೂಮಿಯ ‘ಅ-ಖರಾಬ್’ ತೆರವುಗೊಳಿಸಲು 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ವಿರುದ್ಧ…
ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಭೂತಪೂರ್ವ ವೇಗ ನೀಡಿದ್ದಾರೆ. ಒಂದೆಡೆ ಮೇಕೆದಾಟು ಯೋಜನೆ…
ದೊಡ್ಡಬಳ್ಳಾಪುರ: ಪತಿಯೊಂದಿಗೆ ಲಾಡ್ಜ್‌ಗೆ ತೆರಳಿದ್ದ 21 ವರ್ಷದ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಮೃತರನ್ನು ಗೌರಿಬಿದನೂರು ತಾಲೂಕಿನ…
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಸಹ ಆಡಳಿತ ಉಸ್ತುವಾರಿಯಾಗಿ…