ಅಧಿಕ ಭದ್ರತಾ ಠೇವಣಿ 30ದಿನಗಳ ಒಳಗಾಗಿ ಪಾವತಿ ಮಾಡದೆ ಇದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕುರಿತು ನೋಟೀಸ್ ನೀಡಿರುವ ಬಗ್ಗೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ತಕ್ಕಂತೆ ಟಿ.ಸಿ.ಗಳನ್ನು ಅಳವಡಿಸಲು ಮತ್ತು ವಿದ್ಯುತ್ ಗ್ರಾಹಕರು ವಿವಿಧ ಕೆಲಸಗಳಿಗೆ ಕಚೇರಿಗೆ ಬಂದಾಗ ಎಎಸ್‌ಡಿ ಕಟ್ಟಿದರೆ ಮಾತ್ರ ನಿಮ್ಮ ಕೆಲಸ ಇಲ್ಲದಿದ್ದರೆ ಇಲ್ಲ ಎಂದು ಹೇಳುತ್ತಿರುವುದರ ವಿರುದ್ಧ ಹಾಗೂ ಇನ್ನಿತರೆ ವಿಚಾರಗಳನ್ನು ಒತ್ತಾಯಿಸಿ ನಗರದ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನೇಕಾರರಾದ ನಾವುಗಳು ಈ ಉದ್ದಿಮೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದೇವೆ ನಮಗೆ ನಿಗದಿತ ಆದಾಯವಿರುವುದಿಲ್ಲ. ನೇಯ್ದ ಬಟ್ಟೆಯನ್ನು ಮಧ್ಯವರ್ತಿಗಳ ವ್ಯಾಪಾರಸ್ಥರ ಮೂಲಕ ವ್ಯಾಪಾರ ಮಾಡುತ್ತಿರುತ್ತೇವೆ. ಕಳೆದ ಕೆಲವು ವರ್ಷಗಳಿಂದ ಪದೇ ಪದೇ ಈ ಉದ್ಯಮ ಬಿಕ್ಕಟ್ಟಿಗೆ ಒಳಗಾಗುತ್ತಿದೆ. ಕಚ್ಚಾ ಪದಾರ್ಥಗಳ ವಿಪರೀತ ಬೆಲೆ ಏರಿಕೆ ನೇಯ್ದ ಬಟ್ಟೆಗೆ ಲಾಭದಾಯಕ ಬೆಲೆ ಸಿಗದೆ ತುಂಬಾ ಸಂಕಷ್ಟದಲ್ಲಿರುತ್ತೇವೆ ಎಂದು ನೇಕಾರರು ತಮ್ಮ ಅಳಲನ್ನು ತೋಡಿಕೊಂಡರು.
ಇತ್ತೀಚೆಗೆ ಬಂದ ಬರಗಾಲ ನೆರೆಹಾವಳಿ, ಅತಿವೃಷ್ಟಿ, ನೋಟ್ ಬ್ಯಾನ್ ಹಾಗೂ ಜಿಎಸ್‌ಟಿ ಮತ್ತು ಕೊರೋನಾ ವೈರಸ್ ಕೋವಿಡ್-19 ಲಾಕ್‌ಡೌನ್ ನಿಂದ ನಮ್ಮ ಉದ್ಯಮ ಸಂಪೂರ್ಣವಾಗಿ ನಾಶವಾಗುವ ಸ್ಥಿತಿಗೆ ತಲುಪಿದೆ. ಕಳೆದ ಒಂದೆರಡು ವರ್ಷಗಳಿಂದ ನೇಯ್ದ ಬಟ್ಟೆ ಸೂಕ್ತ ರೀತಿಯಲ್ಲಿ ಮಾರಾಟವಾಗಿಲ್ಲ. ಒಂದು ವೇಳೆ ಮಾರಾಟವಾದರೂ ಸಹ ಸರಿಯಾದ ಲಾಭದಾಯಕ ಬೆಲೆ ಇಲ್ಲದೆ ಮಗ್ಗಗಳನ್ನು ನಡೆಸಲಾಗದೇ ನೇಕಾರರು ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಕುಟುಂಬದ ಆರೋಗ್ಯಕ್ಕಾಗಿ, ವಸತಿಗಾಗಿ ಅಭದ್ರತೆಯಲ್ಲಿರುವ ನಾವುಗಳು ವಿವಿಧ ರೀತಿಯ ಸಾಲಗಳಿಂದ ನೇಕಾರಿಕೆಯನ್ನು ಮುಂದುವರೆಸುತ್ತಿದ್ದೇವೆ. ಮಾರುಕಟ್ಟೆಯ ಅಸ್ಥಿರತೆಯಿಂದ ಸಾಲದ ಸುಳಿಯಲ್ಲಿ ಸಿಲುಕಿ ಅನ್ನದಾತ ರೈತರ ರೀತಿಯಲ್ಲಿಯೇ ವಸ್ತ್ರಧಾತರಾದ ನೇಕಾರರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯ ದೊಡ್ಡಬಳ್ಳಾಪುರ ತಾಲೂಕು ಸಮಿತಿ ಅಧ್ಯಕ್ಷರಾದ ಪಿ.ಎ ವೆಂಕಟೇಶ್ ಹೇಳಿದರು.
ರಾಜ್ಯದಲ್ಲಿ ಈಗಾಗಲೇ 51ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಮ್ಮ ನೇಕಾರರ ಹಲವು ರೀತಿಯ ಸಮಸ್ಯೆಗಳನ್ನು ಸರ್ಕಾರಗಳ ಗಮನ ಸೆಳೆದಾಗ ನಮಗೆ ಕಳೆದ ಒಂದು ವರ್ಷದಿಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ವಾರ್ಷಿಕ 5 ಸಾವಿರ ರೂ. ನೇಕಾರರ ಸಮ್ಮಾನ್ ಯೋಜನೆಯಲ್ಲಿ ನೀಡುತ್ತಿದೆ. ಇದನ್ನೆಲ್ಲಾ ಸದುಪಯೋಗಪಡಿಸಿಕೊಂಡು ಹೇಗೊ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಅಧಿಕ ಭದ್ರತಾ ಠೇವಣಿ(ಎಎಸ್‌ಡಿ) 30 ದಿನಗಳಲ್ಲಿ ಕಟ್ಟಲೇಬೇಕೆಂದು ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ಪವರ್ ಮತ್ತು ಲೈಟಿಂಗ್ ಬಳಕೆದಾರರಿಗೆ ನೋಟೀಸ್ ನೀಡಿರುವುದು ಸರಿಯಲ್ಲ. ಕಟ್ಟದಿದ್ದರೆ ಅವರ ಕೆಲಸಗಳನ್ನು ಮಾಡಿಕೊಡದೆ ವಾಪಸ್ಸು ಕಳುಹಿಸುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದರು.
ಕರೇನಹಳ್ಳಿ, ಭುವನೇಶ್ವರಿನಗರ, ಶ್ರೀನಗರ, ಖಾಸ್‌ಬಾಗ್, ದರ್ಗಾಜೋಗಿಹಳ್ಳಿ, ಶಾಂತಿನಗರ, ಮುತ್ತೂರು, ಸಿದ್ದೇನಾಯ್ಕನಹಳ್ಳಿ, ವಿದ್ಯಾನಗರ ಸೇರಿದಂತೆ ದೊಡ್ಡಬಳ್ಳಾಪುರ ನಗರದ ಅಂಚಿನ ಭಾಗದಲ್ಲಿರುವ ಇನ್ನು ಮುಂತಾದ ಪ್ರದೇಶಗಳಲ್ಲಿ ಹೆಚ್ಚುವರಿ ವಿದ್ಯುತ್ ಸಂಪರ್ಕಗಳ ಬೇಡಿಕೆ ಇರುವುದರಿಂದ ಇಂತಹ ಕಡೆ ಅಗತ್ಯವಿರುವ ಹೆಚ್ಚಿನ ಸಾಮರ್ಥ್ಯವಿರುವ ಟಿಸಿಗಳನ್ನು ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಸಾಕಷ್ಟು ಬಾರಿ ಹಲವಾರು ವರ್ಷಗಳಿಂದ ಕೇಳುತ್ತಿದ್ದರೂ ಸಹ ಈ ಬಗ್ಗೆ ಯಾವುದೇ ಕ್ರಮಗಳಿಲ್ಲದೆ ಇರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಯಾವಾಗಲೂ ಸಿಂಗಲ್ ಫೀಸ್ ಆಗುವಂತ ಪ್ರದೇಶಗಳನ್ನು ಗಮನಿಸಬೇಕು. ಆದರೆ, ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮಕೈಗೊಳ್ಳದಿರುವುದು ಸರಿಯಲ್ಲ. ಗ್ರಾಹಕರು ಫೋನ್ ಮಾಡಿದರೆ ಸಹ ಸ್ಪಂದಿಸುವಂತಾಗಬೇಕು. ನಗರದ ವಿವಿಧ ಪ್ರದೇಶಗಳಲ್ಲಿ ಸಾಕಷ್ಟು ವರ್ಷಗಳಿಂದ ಇರುವಂತ ಟಿಸಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ವಿದ್ಯುತ್ ಗ್ರಾಹಕರಿಗೆ ತುಂಬಾ ತೊಂದರೆ ಆಗುತ್ತಿದೆ, ಈ ಬಗ್ಗೆ ಸಾಕಷ್ಟು ಬಾರಿ ಬೆಸ್ಕಾಂ ಗಮನಕ್ಕೆ ತರಲಾಗಿದೆ ಆದರೂ ಪ್ರಯೋಜನವಾಗಿಲ್ಲ ಎಂದು ರೈತ ಮುಖಂಡ ಆರ್.ಚಂದ್ರ ತೇಜಸ್ವಿ ಆಕ್ರೋಶ ವ್ಯಕ್ತಪಡಿಸಿದರು.
ನೇಕಾರರು ಸಂಕಷ್ಟದಲ್ಲಿರುವಾಗ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ಕಠಿಣವಾಗಿ ನಡೆದುಕೊಳ್ಳುವುದನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಎಎಸ್‌ಡಿ ಮನ್ನಾ ಹಾಗೂ ಕೆಲವು ಪಾಲಿಸಿ ವಿಚಾರಗಳ ಬಗ್ಗೆ ಸರ್ಕಾರದ ಸಂಬಂದಪಟ್ಟ ಅಧಿಕಾರಿಗಳ ಗಮನ ಸೆಳೆಯಲು ನಮ್ಮ ಸಂಘಟನೆ ನಿರಂತರ ಪ್ರಯತ್ನಿಸುತ್ತದೆ ಎಂದರು.
ನೇಕಾರರ ವಿವಿಧ ಬೇಡಿಕೆಗಳ ವಿವರ….
1. ಅಧಿಕ ಭದ್ರತಾ ಠೇವಣಿ(ಎಎಸ್‌ಡಿ) ವಸೂಲಿಗೆ ನೀಡಿರುವ ನೋಟೀಸ್ ವಾಪಸ್ಸು ಪಡೆಯಬೇಕು
2. ನೇಕಾರರು ಮತ್ತು ವಿದ್ಯುತ್ ಗ್ರಾಹಕರು ವಿವಿಧ ಕೆಲಸಗಳಿಗೆ ಬೆಸ್ಕಾಂ ಕಚೇರಿಗೆ ಬಂದಾಗ ಎಎಸ್‌ಡಿ ಕಟ್ಟಲು ಒತ್ತಾಯಿಸದೆ ಗ್ರಾಹಕರ ಕೆಲಸಗಳನ್ನು ಮಾಡಿಕೊಡಬೇಕು.
3. ಸಂಕಷ್ಟದಲ್ಲಿರುವ ನೇಕಾರರ ಜೊತೆ ಕಠಿಣವಾಗಿ ವರ್ತಿಸುವುದು ನಿಲ್ಲಿಸಬೇಕು.
4. ಸರ್ಕಾರವು ಅಧಿಕ ಭದ್ರತಾ ಠೇವಣಿ ಎಎಸ್‌ಡಿ ಮನ್ನಾ ಮಾಡಬೇಕು.
5. ಕರೇನಹಳ್ಳಿ, ಭುವನೇಶ್ವರೀನಗರ, ಖಾಸ್‌ಬಾಗ್, ಶ್ರೀನಗರ, ದರ್ಗಾಜೋಗಿಹಳ್ಳಿ, ಶಾಂತಿನಗರ, ಮುತ್ತೂರು, ಸಿದ್ದೇನಾಯಕನಹಳ್ಳಿ, ವಿದ್ಯಾನಗರ ಸೇರಿದಂತೆ ದೊಡ್ಡಬಳ್ಳಾಪುರದ ಅಂಚಿನ ಭಾಗದಲ್ಲಿರುವ ಇನ್ನು ಮುಂತಾದ ಪ್ರದೇಶಗಳಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳು ಟಿಸಿ ಅಳವಡಿಸಬೇಕು ಮತ್ತು ನಗರದ ಮದ್ಯಭಾಗದಲ್ಲಿರುವ ಟಿಸಿಗಳು ಆಗಾಗ ಕೆಟ್ಟುಹೋಗಿ ತೊಂದರೆ ನೀಡುತ್ತಿವೆ. 7-8 ದಿನಗಳಾದರೂ ಸಹ ಸರಿಪಡಿಸದೆ ತೊಂದರೆ ನೀಡುವುದು ಸರಿಯಲ್ಲ ಇಂತಹ ಕಡೆ ಹೊಸ ಟ್ರಾನ್ಸ್‌ಫಾರ್ಮ‌್ರಗಳನ್ನು ಅಳವಡಿಸಲು ಒತ್ತಾಯಿಸುತ್ತೇವೆ.
6. ಹೆಚ್ಚುವರಿ ಟಿಸಿ ಬೇಕೆಂದು ನೇಕಾರರು ಅರ್ಜಿಗಳನ್ನು ಸಲ್ಲಿಸಿ ಹಲವಾರು ತಿಂಗಳುಗಳು ಕೆಲವು ಕಡೆ ಒಂದೆರಡು ವರ್ಷಗಳು ಕಳೆದರೂ ಸಹ ಏನೇನೋ ಕಾರಣ ನೀಡಿ ಟಿಸಿಗಳನ್ನು ಅಳವಡಿಸಿದೆ ವಿದ್ಯುತ್ ಗ್ರಾಹಕರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು.
7. ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು 200ಯುನಿಟ್ ವರೆಗೆ 2023 ಜುಲೈ ತಿಂಗಳಿಂದ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದೆ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯು ಬಡ, ಮದ್ಯಮ ವರ್ಗಗಳಿಗೆ ಅನುಕೂಲವಾಗುವ ಗೃಹಜ್ಯೋತಿಯನ್ನು ಸ್ವಾಗತಿಸುತ್ತದೆ. ಈ ಯೋಜನೆಯ ದಾರಿಯಲ್ಲಿರುವ ಹಲವು ತೊಡಕುಗಳನ್ನು ನಿವಾರಿಸಲು ರಾಜ್ಯ ಸರ್ಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ.
8. ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣಾ ಆಯೋಗ (ಕೆಇಆರ್‌ಸಿ) ಸಂಸ್ಥೆಯನ್ನು ಹುಟ್ಟುಹಾಕಿದ್ದೇ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮತ್ತು ವಿದ್ಯುತ್ ಬೆಲೆ ಏರಿಕೆಯನ್ನು ನಿಯಮಿತವಾಗಿ ಹೆಚ್ಚಿಸುವ ದುರುದ್ದೇಶದಿಂದ ಆದ್ದರಿಂದ ಕೆಇಆರ್‌ಸಿಯನ್ನು ರದ್ದುಪಡಿಸಬೇಕು.
9. ಭಾರತ ಸರ್ಕಾರದ ಇಂಧನ ಇಲಾಖೆ ವಿದ್ಯುತ್‌ಚ್ಚಕ್ತಿ ತಿದ್ದುಪಡಿ ಮಸೂದೆ 2022ರ ಅಧಿಸೂಚನೆಯನ್ನು ಪ್ರಕಟಿಸಿದೆ, ವಿದ್ಯುತ್ ಎಂಬುದು ಸಮಾಜಿಕ, ಆರ್ಥಿಕ ಮಹತ್ವದ ಒಂದು ಸೇವೆ ಈ ಕಾಯ್ದೆ ಜಾರಿಯಾದರೆ ದೇಶದ 5 ಲಕ್ಷ ಕೋಟಿ ಬೃಹತ್ ಪ್ರಮಾಣದ ಆಸ್ತಿ ಕಾರ್ಪೋರೇಟ್ ಕಂಪನಿಗಳಿಗೆ ಸೇರುತ್ತದೆ, ಖಾಸಗಿಯವರ ಪಾಲಾಗುತ್ತದೆ ಇದರ ಪರಿಣಾಮ ದೇಶದ ರೈತರು ನೇಕಾರರು ಎಲ್ಲಾ ವಿದ್ಯುತ್ ಗ್ರಾಹಕರು ಬೀದಿಗೆ ಬೀಳಲ್ಲಿದ್ದಾರೆ ಆದ್ದರಿಂದ ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮಾಡಬಾರದು ಮತ್ತು ಇದರ ಭಾಗವಾಗಿ ಜನರಿಗೆ ಸಿಗುತ್ತಿರುವ ಎಲ್ಲಾ ರೀತಿಯ ಸಬ್‌ಸೀಡಿಗಳನ್ನು ರದ್ದು ಮಾಡಲು ಹಾಗೂ ದರಗಳನ್ನು ಏರಿಸಲು ವಂಚಕ ಕ್ರಮವಾಗಿ ನೇರ ನಗದು ವರ್ಗಾವಣೆ(ಡಿಬಿಟಿ) ನೀತಿಯನ್ನು ಜಾರಿಗೊಳಿಸುತ್ತಿದೆ. ಡಿಬಿಟಿ ಮೂಲಕ ಜನರನ್ನು ವಂಚಿಸುವುದು ಹೇಗೆಂದು ಅಡುಗೆ ಅನಿಲ ಸಿಲಿಂಡರ್ ವಿಚಾರದಲ್ಲಿ ಈಗಾಗಲೆ ಗೊತ್ತಾಗಿದೆ ಜೊತೆಗೆ ಪ್ರಿಪೇಡ್ ಸ್ಟಾರ್ ಮೀಟರ್‌ಗಳ ಬಳಕೆಗೆ ಸಂಬಂಧಿಸಿ ಒಕ್ಕೂಟ ಸರ್ಕಾರವು ಗ್ರಾಹಕರ ಹಕ್ಕುಗಳ ಕರಡು ವಿದ್ಯುತ್ ತಿದ್ದುಪಡಿ ನಿಯಮಗಳನ್ನು 2023 ಮಾರ್ಚ್‌ನಲ್ಲಿ ಪ್ರಕಟಿಸಿದೆ ಪ್ರಸಕ್ತ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿದ್ಯುತ್ ನೀತಿಯು ಅತ್ಯಂತ ಜನವಿರೋದಿಯಾಗಿದೆ ಇದು ವಾಪಾಸ್ಸು ಆಗಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ನೇಕಾರರ ಮನವಿಯನ್ನು ಸ್ವೀಕರಿಸಿದ ಬೆಸ್ಕಾಂ ಅಧಿಕಾರಿಗಳು, ಅಧಿಕ ಭದ್ರತಾ ಠೇವಣಿ (ಎ ಎಸ್ ಡಿ) ನೇಕಾರರಿಂದ ವಿದ್ಯುತ್ ಗ್ರಾಹರಿಂದ ಒತ್ತಾಯಪೂರ್ವಕವಾಗಿ ವಸೂಲಿ ಮಾಡುವುದಿಲ್ಲ. ಈ ಬಗ್ಗೆ ದೊಡ್ಡಬಳ್ಳಾಪುರದ ನೇಕಾರರ ಮುಖಂಡರ ವಿದ್ಯುತ್ ಗ್ರಾಹಕರ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ನೇಕಾರರು ವಿದ್ಯುತ್ ಗ್ರಹಕರು ಹಲವು ಯೋಜನೆಗಳಿಗೆ ಬೇಕಾಗುವ ದಾಖಲೆಗಳನ್ನು ಪಡೆಯಲು ಎ ಎಸ್ ಡಿ ಕಟ್ಟಲು ಒತ್ತಾಯಿಸುವುದಿಲ್ಲ ಎಂದು ಭರವಸೆ ನೀಡಿದರು.
ಅಧಿಕ ಭದ್ರತಾ ಠೇವಣಿ ಎ ಎಸ್ ಡಿ ಮನ್ನಾ ಮಾಡುವ ವಿಚಾರವನ್ನು ಮೇಲ್ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ ಎಂದು ತಿಳಿಸಿದರು.
ಇನ್ನೂ ಒಂದು ವಾರ ಅಥವಾ 15 ದಿನಗಳ ಒಳಗಾಗಿ ನಮ್ಮ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರರಿವರ್ತಕಗಳನ್ನು ಅಳವಡಿಸಲು ಸೂಕ್ತ ಕ್ರಮ ಜರುಗಿಸುತ್ತೇವೆ. ಇನ್ನು ಮುಂದೆ ಈ ರೀತಿಯ ಸಮಸ್ಯೆ ಇಲ್ಲದ ಹಾಗೆ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯ ದೊಡ್ಡಬಳ್ಳಾಪುರ ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಸುರೇಶ್ ಸಿ, ಆರ್.ಎಸ್ ಶ್ರೀನಿವಾಸ, ಸಹ ಕಾರ್ಯದರ್ಶಿಗಳಾದ ಎಂ ಮುನಿರಾಜು.ಎಂ, ಚೌಡಯ್ಯ.ಕೆ, ರಘುಕುಮಾರ್. ಸಿ ಅಶ್ವತ್, ಸದಾಶಿವಪ್ಪ, ಲಕ್ಷ್ಮಿಪತಿ, ಗಿರೀಶ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ 14 ) ಅವರ ವ್ಯಕ್ತಿತ್ವ ಮತ್ತು…
In der heutigen akademischen Welt steht die Qualität der schriftlichen Arbeiten im Mittelpunkt des Interesses.…
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…