
ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆಯ ಖಾಸಗಿ ಅಂಗವನ್ನು ತುಳಿದು ದೌರ್ಜನ್ಯ ನಡೆಸಿ ಮಹಿಳೆಯ ಸಾವಿಗೆ ಕಾರಣನಾದ ಕಾಮುಕನನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನದ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ..
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ಏಪ್ರಿಲ್ 29 ರಂದು ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆಯ ಖಾಸಗಿ ಅಂಗವನ್ನು ಚಂದ್ರ ಎಂಬಾತ ತುಳಿದು ದೌರ್ಜನ್ಯ ನಡೆಸಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದರು.
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆ ರಮ್ಯಾ(34) ಮಹಿಳೆ ಸಾವು.

ಎರಡು ವರ್ಷಗಳ ಹಿಂದೆ ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ರಮ್ಯಾ ಎಂಬಾಕೆ ಚಂದ್ರ ಎಂಬುವವನ ಗೆಳೆತನ ಹೊಂದಿದ್ದಳು.
ಏಪ್ರಿಲ್ 27 ರಂದು ಅತ್ತೆ ಮೃತಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೋಂ ನರ್ಸಿಂಗ್ ಸೇವೆ ಮಾಡಿಕೊಂಡಿದ್ದ ರಮ್ಯಾ ಗ್ರಾಮಕ್ಕೆ ಬಂದಿದ್ದಳು. ರಮ್ಯಾ ಊರಿಗೆ ಬಂದಿದ್ದರಿಂದ ತನ್ನೊಟ್ಟಿಗೆ ಬರುವಂತೆ ಚಂದ್ರ ಪಟ್ಟು ಹಿಡಿದಿದ್ದ. ಆದರೆ, ಚಂದ್ರನ ಆಸೆಗೆ ಒಪ್ಪದ ಕಾರಣದಿಂದ ಮನಸೊ ಇಚ್ಚೆ ಹಲ್ಲೆ ನಡೆಸಿದ್ದ.
ರಮ್ಯಾ ಊರಿಗೆ ಬಂದಾಗ ಖಾಸಗಿ ಬೇಟಿಗೆ ಕರೆದಿದ್ದ ಚಂದ್ರ. ಈ ವೇಳೆ ರಮ್ಯಾ ಒಪ್ಪಲಿಲ್ಲ. ಆಗ ಕೋಪಗೊಂಡ ಚಂದ್ರ ಮಹಿಳೆಯ ಖಾಸಗಿ ಅಂಗಕ್ಕೆ ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದ.
ಸದ್ಯ ಆರೋಪಿ ಚಂದ್ರನನ್ನ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…