ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ: ಆರ್.ಆರ್. ನಗರದ SPARSH ಆಸ್ಪತ್ರೆಯಲ್ಲಿ 5 ವಿಶೇಷ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್‌ಗಳ ಆರಂಭ

ಬೆಂಗಳೂರು, ಜುಲೈ 2026: ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ-2026ರ ಅಂಗವಾಗಿ, ಬೆಂಗಳೂರಿನ ಆರ್.ಆರ್. ನಗರದ ಸ್ಪರ್ಶ್ ಆಸ್ಪತ್ರೆ ಸಂಕೀರ್ಣ ಪುನರ್‌ನಿರ್ಮಾಣ, ಕಾರ್ಯಾತ್ಮಕ ಹಾಗೂ ಸೌಂದರ್ಯವರ್ಧಕ ಚಿಕಿತ್ಸೆಗಳ ಅಗತ್ಯವಿರುವ ರೋಗಿಗಳಿಗೆ ಸಮಗ್ರ ಹಾಗೂ ರೋಗಿಕೇಂದ್ರಿತ ಸೇವೆ ಒದಗಿಸುವ ಉದ್ದೇಶದಿಂದ ಐದು ಮಲ್ಟಿಡಿಸಿಪ್ಲಿನರಿ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್ಸ್ ಆಫ್ ಎಕ್ಸಲೆನ್ಸ್ ಅನ್ನು ಆರಂಭಿಸಿದೆ.

ರೋಗಿಗಳಿಗೆ ಒಂದೇ ಸೂರಿನಡಿ ವಿವಿಧ ತಜ್ಞ ವೈದ್ಯರಿಂದ ಸಮಗ್ರ ಚಿಕಿತ್ಸೆ, ನಿಖರ ರೋಗನಿರ್ಣಯ ಹಾಗೂ ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ಒದಗಿಸುವ ಉದ್ದೇಶದಿಂದ ಈ ವಿಶೇಷ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. ಪ್ಲಾಸ್ಟಿಕ್ ಸರ್ಜರಿ, ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸೆ ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಗುಣಮಟ್ಟದ ಸೇವೆ ನೀಡುವತ್ತ ಆಸ್ಪತ್ರೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಹೊಸದಾಗಿ ಆರಂಭಿಸಲಾದ ಕ್ಲಿನಿಕ್‌ಗಳಲ್ಲಿ ಅಡ್ವಾನ್ಸ್ಡ್ ವೂಂಡ್ ಹೀಲಿಂಗ್ ಮತ್ತು ಲಿಂಬ್ ಸಾಲ್ವೇಜ್ ಕ್ಲಿನಿಕ್, ಅಡ್ವಾನ್ಸ್ಡ್ ಫೇಶಿಯಲ್ ಎಸ್ಥೆಟಿಕ್ಸ್ ಮತ್ತು ಕ್ರೇನಿಯೊ-ಮ್ಯಾಕ್ಸಿಲೋಫೇಶಿಯಲ್ ರಿಸ್ಟೋರೇಷನ್ ಕ್ಲಿನಿಕ್, ಅಡ್ವಾನ್ಸ್ಡ್ ಹ್ಯಾಂಡ್, ನರ್ವ್ ಮತ್ತು ಅಪರ್ ಲಿಂಬ್ ಕ್ಲಿನಿಕ್, ಬ್ರೆಸ್ಟ್ ಕ್ಲಿನಿಕ್ ಆಫ್ ಎಕ್ಸಲೆನ್ಸ್ ಹಾಗೂ ಸ್ಕಾರ್ ಕ್ಲಿನಿಕ್ ಆಫ್ ಎಕ್ಸಲೆನ್ಸ್ ಸೇರಿವೆ.

ಈ ಕ್ಲಿನಿಕ್‌ಗಳಲ್ಲಿ ಅನುಭವಿ ಪ್ಲಾಸ್ಟಿಕ್ ಸರ್ಜನ್‌ಗಳು ಹಾಗೂ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರು ಒಟ್ಟಾಗಿ ಸೇವೆ ನೀಡಲಿದ್ದಾರೆ. ಸಂಕೀರ್ಣ ಗಾಯಗಳ ಚಿಕಿತ್ಸೆ, ಗಾಯಗಳು ಶೀಘ್ರ ಗುಣಮುಖವಾಗುವಂತೆ ಮಾಡುವ ಚಿಕಿತ್ಸಾ ವಿಧಾನಗಳು, ಅಂಗಗಳನ್ನು ಉಳಿಸಿಕೊಳ್ಳುವ ಚಿಕಿತ್ಸೆಗಳು, ಕೈ ಮತ್ತು ನರಗಳ ಕಾರ್ಯಕ್ಷಮತೆಯ ಪುನಃಸ್ಥಾಪನೆ, ಸ್ತನ ಸಂಬಂಧಿತ ಆರೋಗ್ಯ ಸಮಸ್ಯೆಗಳು, ಗಾಯದ ಗುರುತುಗಳ ನಿರ್ವಹಣೆ ಹಾಗೂ ಮುಖದ ಪುನರ್‌ನಿರ್ಮಾಣ ಚಿಕಿತ್ಸೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

ವಿಶೇಷ ಉಪಕ್ರಮವಾಗಿ ಜುಲೈ 2026ರ ಅವಧಿಯಲ್ಲಿ ಈ ಐದು ಕ್ಲಿನಿಕ್ಸ್ ಆಫ್ ಎಕ್ಸಲೆನ್ಸ್‌ಗಳಲ್ಲಿ ಉಚಿತ ಮಲ್ಟಿಡಿಸಿಪ್ಲಿನರಿ ಮೌಲ್ಯಮಾಪನ ಸೌಲಭ್ಯವನ್ನು ಆಸ್ಪತ್ರೆ ಕಲ್ಪಿಸಿದೆ. ಜುಲೈ ನಂತರವೂ ಈ ಸೇವೆ ರಿಯಾಯಿತಿ ದರದಲ್ಲಿ ಲಭ್ಯವಿರಲಿದ್ದು, ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡದಿಂದ ರೋಗಿಗಳು ಸಮಗ್ರ ಆರೋಗ್ಯ ಮೌಲ್ಯಮಾಪನ ಹಾಗೂ ವೈಯಕ್ತಿಕ ಚಿಕಿತ್ಸಾ ಸಲಹೆ ಪಡೆಯಬಹುದಾಗಿದೆ..

ಈ ಹೊಸ ಸೇವೆಗಳ ಆರಂಭದೊಂದಿಗೆ ಸುಧಾರಿತ ಪ್ಲಾಸ್ಟಿಕ್ ಹಾಗೂ ರೀಕನ್‌ಸ್ಟ್ರಕ್ಟಿವ್ ಸರ್ಜರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿರುವ ಸ್ಪರ್ಶ್ ಆಸ್ಪತ್ರೆ, ರೋಗಿಗಳಿಗೆ ವೈಯಕ್ತಿಕ ಅಗತ್ಯಗಳಿಗೆ ತಕ್ಕ ಚಿಕಿತ್ಸೆ, ದೇಹದ ಕಾರ್ಯಕ್ಷಮತೆಯ ಪುನಃಸ್ಥಾಪನೆ ಹಾಗೂ ಉತ್ತಮ ಜೀವನಮಟ್ಟ ಕಲ್ಪಿಸುವತ್ತ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

ಅಪಾಯಿಂಟ್‌ಮೆಂಟ್ ಹಾಗೂ ಉಚಿತ ಮೌಲ್ಯಮಾಪನಕ್ಕಾಗಿ 080 6122 2000 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Ramesh Babu

Journalist

Recent Posts

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

3 hours ago

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

15 hours ago

ರಾಜಾನುಕುಂಟೆ ಬಳಿ ರೈಲು ಬೋಗಿಗಳಿಗೆ ಬೆಂಕಿ: ಎರಡು ಬೋಗಿಗಳು ಸುಟ್ಟು ಭಸ್ಮ

ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…

21 hours ago

ಮಧುರೆ ಕೆರೆಯಲ್ಲಿ ಮಣ್ಣು ದಂಧೆ ಆರೋಪ: ಸುಮಾರು 35 ಟ್ರ್ಯಾಕ್ಟರ್, 5 ಜೆಸಿಬಿಗಳ ಅಬ್ಬರ; ಮಣ್ಣು ತೆಗೆಯುವುದಕ್ಕೆ ಗ್ರಾಮಸ್ಥರ ಬ್ರೇಕ್!

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್‌ಗಳು…

22 hours ago

ನಮ್ಮ ತೆರಿಗೆ ನಮ್ಮ ಹಕ್ಕು…

ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…

1 day ago

ದೇವನಹಳ್ಳಿ ಬಳಿ ಭೀಕರ ಅಪಘಾತ: ಓರ್ವ ಸಾವು: ಹಲವರಿಗೆ ಗಾಯ

ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…

1 day ago