UPSC 2022ರ ಫಲಿತಾಂಶ ರಿಲೀಸ್: ಟಾಪರ್ ಆದ ಇಶಿತಾ ಕಿಶೋರ್: ಮೊದಲ ನಾಲ್ಕು ಸ್ಥಾನಗಳು ಮಹಿಳೆಯರ ಪಾಲು

 

ದೇಶದ ಪ್ರತಿಷ್ಠಿತ ಹಾಗೂ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳ 2022ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಆಶಿತಾ ಕಿಶೋರ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಆಶಿತಾ ಕಿಶೋರ್ ಅವರು ನವದೆಹಲಿಯ ಶ್ರೀರಾಮ್‌ ಕಾಲೇಜ್‌ ಆಫ್‌ ಕಾಮರ್ಸ್‌ನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವೀಧರೆಯಾಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಯುಪಿಎಸ್‌ಸಿ ಸಿಎಸ್‌ಇ 2022 ರ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಇಶಿತಾ ಕಿಶೋರ್ ಮೊದಲ ಸ್ಥಾನ, ಗರಿಮಾ ಲೋಹಿಯಾ ಎರಡನೇ ಸ್ಥಾನದಲ್ಲಿದ್ದಾರೆ, ಉಮಾ ಹರ್ತಿ.ಎನ್ ಮೂರನೇ ಮತ್ತು ಸ್ಮೃತಿ ಮಿಶ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲ ನಾಲ್ಕು ಸ್ಥಾನಗಳು ಮಹಿಳೆಯರ ಪಾಲಾಗಿರುವುದು ವಿಶೇಷ.

ಈ ಬಾರಿ ಕರ್ನಾಟಕದ 25 ಮಂದಿ ಆಯ್ಕೆಯಾಗಿದ್ದು ಬಹಳ ಸಂತಸದ ಸಂಗತಿಯಾಗಿದೆ, ಕೋಟ್ಯಂತರ ಯುವಕ ಯುವತಿಯರ ಕನಸಾಗಿರುವ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಗುವುದು ಎಂದರೆ ಅಷ್ಟು ಸುಲಭದ ಮಾತಲ್ಲ, ಅದರಲ್ಲೂ ಪಾಸಗಿರುವ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

ಐಎಎಸ್ 180, ಐಪಿಎಸ್ 200, ಐಎಫ್ಎಸ್ 38, ಗ್ರೂಪ್ ಎ 473, ಹಾಗೂ ಗ್ರೂಪ್ ಬಿ ಹುದ್ದೆಗೆ 131ಮಂದಿ ಆಯ್ಕೆಯಾಗಿದ್ದಾರೆ.

IAS ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು UPSC ಯ ಅಧಿಕೃತ ವೆಬ್‌ಸೈಟ್ www.upsc.gov.in ನಲ್ಲಿ ಅಂತಿಮ ಫಲಿತಾಂಶವನ್ನು ಪರಿಶೀಲಿಸಬಹುದು.

ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಒಟ್ಟು 933 ಅಭ್ಯರ್ಥಿಗಳು ನೇಮಕಾತಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ 345 ಅಭ್ಯರ್ಥಿಗಳು ಮೀಸಲಾತಿ ರಹಿತ, 99 ಇಡಬ್ಲ್ಯೂಎಸ್, 263 ಒಬಿಸಿ, 154 ಎಸ್‌ಸಿ ಮತ್ತು 72 ಎಸ್‌ಟಿ ವರ್ಗದವರು. 178 ಅಭ್ಯರ್ಥಿಗಳ ಮೀಸಲು ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಐಎಎಸ್ ಹುದ್ದೆಗಳ ಆಯ್ಕೆಗೆ 180 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.

ಟಾಪ್ 10ರ ಸ್ಥಾನದಲ್ಲಿ ಇರುವ ಅಭ್ಯರ್ಥಿಗಳು

1. ಇಶಿತಾ ಕಿಶೋರ್
2. ಗರಿಮಾ ಲೋಹಿಯಾ
3. ಉಮಾ ಹಾರ್ತಿ ಎನ್
4. ಸ್ಮೃತಿ ಮಿಶ್ರಾ
5. ಮಯೂರ್ ಹಜಾರಿಕಾ
6. ಆಭರಣ ನವ್ಯಾ ಜೇಮ್ಸ್
7. ವಾಸಿಂ ಅಹ್ಮದ್ ಭಟ್
8. ಅನಿರುದ್ಧ್ ಯಾದವ್
9. ಕನಿಕಾ ಗೋಯಲ್
10. ರಾಹುಲ್ ಶ್ರೀವಾಸ್ತವ್

Leave a Reply

Your email address will not be published. Required fields are marked *