UPSC: ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ: ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ದೇಶಕ್ಕೆ ಪ್ರಥಮ

ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2025ರ ಅಂತಿಮ ಫಲಿತಾಂಶವನ್ನು ಆಯೋಗವು ಮಾರ್ಚ್ 6ರಂದು ಪ್ರಕಟಿಸಿದೆ.

ಈ ಬಾರಿ ಅನುಜ್ ಅಗ್ನಿಹೋತ್ರಿ ಅವರು ಅಖಿಲ ಭಾರತ ಮಟ್ಟದಲ್ಲಿ ಫಸ್ಟ್ ರ್ಯಾಂಕ್ (AIR 1) ಪಡೆದು ಇತಿಹಾಸ ನಿರ್ಮಿಸಿದ್ದಾರೆ.

ಟಾಪ್ 3 ಸಾಧಕರು ಯಾರು?

* ಅನುಜ್ ಅಗ್ನಿಹೋತ್ರಿ – 1ನೇ ರ್ಯಾಂಕ್

* ರಾಜೇಶ್ವರಿ ಸುವೆ ಎಂ – 2ನೇ ರ್ಯಾಂಕ್ (ಮಹಿಳಾ ಟಾಪರ್)

* ಆಕಾಂಶ್ ಧುಲ್ – 3ನೇ ರ್ಯಾಂಕ್

ಅಂಕಿ ಅಂಶಗಳು

9,37,876 ಮಂದಿ ಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಸಿದ್ದರು.

5,76,793 ಮಂದಿ ಪ್ರಾಥಮಿಕ ಹಂತದ ಪರೀಕ್ಷೆಗೆ ಹಾಜರಾಗಿದ್ದರು.

14,161 ಮಂದಿ ಲಿಖಿತ (ಮುಖ್ಯ) ಪರೀಕ್ಷೆಗೆ ಅರ್ಹತೆ ಪಡೆದ್ದರು.

2,736 ಮಂದಿ ಅಂತಿಮ ಪರೀಕ್ಷೆಗೆ (ವ್ಯಕ್ತಿತ್ವ ಪರೀಕ್ಷೆ) ಅರ್ಹತೆ ಗಳಿಸಿದ್ದರು‌

958 ಮಂದಿ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!