TAPMCS Election : ಶ್ರೀನಿವಾಸ್ ಮೂರ್ತಿ ಯಾವ ಪಕ್ಷದ ಅಭ್ಯರ್ಥಿ…?: ಕಾಂಗ್ರೆಸ್ ಮತ್ತು NDA ಕೂಟದ ಎರಡು ಕರಪತ್ರಗಳಲ್ಲಿ ಕಾಣಿಸಿಕೊಂಡ ಅಭ್ಯರ್ಥಿ: ಮತದಾರರಲ್ಲಿ ಗೊಂದಲ

ದೊಡ್ಡಬಳ್ಳಾಪುರ : ಶ್ರೀನಿವಾಸ್ ಮೂರ್ತಿ ಯಾವ ಪಕ್ಷದ ಅಭ್ಯರ್ಥಿ ಎಂಬುದೇ ಗೊಂದಲಮಾಯವಾಗಿದೆ. ಸ್ಥಳೀಯವಾಗಿ, ನವೆಂಬರ್ 2ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯ ‘ಎ’ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ.ಬಿ.ಎನ್ ಕಾಂಗ್ರೆಸ್ ಬೆಂಬಲಿತ ಮತ್ತು ಎನ್ ಡಿಎ ಕೂಟದ ಎರಡು ಕರಪತ್ರಗಳಲ್ಲಿ ಕಾಣಿಸಿಕೊಂಡಿರುವುದು ಮತದಾರರ ಗೊಂದಲಕ್ಕೆ ಕಾರಣವಾಗಿದೆ.

‘ಎ’ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ ಪರವಾಗಿ ಕಾಂಗ್ರೆಸ್ ಒಂದೆಡೆ ಪ್ರಚಾರ ಮಾಡಿದರೆ ಮತ್ತೊಂದೆಡೆ ಎನ್ ಡಿ ಎ ( ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ) ಪ್ರಚಾರ ಮಾಡುತ್ತಿದ್ದೆ. ಎರಡು ಪಕ್ಷಗಳು ಮತಯಾಚನೆ ಕರಪತ್ರದಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುದ್ರಿಸಿದ್ದು, ಎರಡು ಕರಪತ್ರಗಳಲ್ಲಿ ಗಂಟಿಗಾನಹಳ್ಳಿ ‘ಎ’ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ ಬಿ.ಎನ್ ಭಾವಚಿತ್ರವಿರುವುದು ಮತದಾರರಲ್ಲಿ ಗೊಂದಲ ಮೂಡಿಸಿದೆ. ಇದೆಂತಾ ಸರ್ವ ಪಕ್ಷಗಳ ಮೈತ್ರಿ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀನಿವಾಸಮೂರ್ತಿ.ಬಿ.ಎಸ್ ನಾನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದೇನೆ. ಅದರೆ ಎನ್ ಡಿಎ ಕೂಟದ ಕರಪತ್ರದಲ್ಲಿ ನನ್ನ ಹೆಸರಿರುವುದು ನನಗೆ ಗೊತ್ತಿಲ್ಲ, ನನ್ನ ಗಮನಕ್ಕೆ ತರದೆ ಕರಪತ್ರದಲ್ಲಿ ನನ್ನ ಹೆಸರು ಹಾಕಿಕೊಂಡಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!