SSLC ಹಾಗೂ PUC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ: ವೇಳಾಪಟ್ಟಿ ಇಲ್ಲಿದೆ…ನೋಡಿ

2026ನೇ ಸಾಲಿನ ಎಸ್​ಎಸ್​ಎಲ್​​ಸಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಮತ್ತು ಪರೀಕ್ಷೆ-2 ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಬುಧವಾರ ಬಿಡುಗಡೆ ಮಾಡಿದೆ.

ದ್ವಿತೀಯ ಪಿಯು ಪರೀಕ್ಷೆ ಫೆಬ್ರುವರಿ 28ರಿಂದ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 18ರಿಂದ ಆರಂಭವಾಗಲಿದೆ.

ದ್ವಿತೀಯ ಪಿಯು ಪರೀಕ್ಷೆ ಮಾರ್ಚ್‌ 17ಕ್ಕೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಏ.2ಕ್ಕೆ ಮುಕ್ತಾಯವಾಗಲಿದೆ.

ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ:

ಫೆ.28: ಕನ್ನಡ, ಅರೇಬಿಕ್‌

ಮಾರ್ಚ್‌ 2: ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ ಮನಃಶಾಸ್ತ್ರ

ಮಾ.3: ಇಂಗ್ಲಿಷ್‌

ಮಾ.4: ತೆಲುಗು, ತಮಿಳು, ಮರಾಠಿ, ಉರ್ದು, ಸಂಸ್ಕೃತ ಫ್ರೆಂಚ್‌, ಮಲಯಾಳಂ

ಮಾ.5: ಇತಿಹಾಸ

ಮಾ.6: ಭೌತ ವಿಜ್ಞಾನ

ಮಾ.7: ಐಚ್ಛಿಕ ಕನ್ನಡ, ಭೂಗರ್ಭ ಶಾಸ್ತ್ರ, ವ್ಯವಹಾರ ಅಧ್ಯಯನ

ಮಾ.9: ರಸಾಯನ ವಿಜ್ಞಾನ, ಶಿಕ್ಷಣಶಾಸ್ತ್ರ, ಮೂಲಗಣಿತ

ಮಾ.10: ಅರ್ಥಶಾಸ್ತ್ರ

ಮಾ.11: ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹ ವಿಜ್ಞಾನ

ಮಾ.12: ಹಿಂದಿ

ಮಾ.13: ರಾಜ್ಯಶಾಸ್ತ್ರ

ಮಾ.14: ಲೆಕ್ಕಶಾಸ್ತ್ರ, ಗಣಿತ

ಮಾ.16: ಸಮಾಜ ಶಾಸ್ತ್ರ, ಜೀವ ವಿಜ್ಞಾನ, ಗಣಕ ವಿಜ್ಞಾನ

ಮಾ.17: ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ ರೀಟೇಲ್‌, ಆಟೊಮೊಬೈಲ್‌, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ:

ಮಾರ್ಚ್‌ 18: ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌ (ಎನ್‌ಸಿಇಆರ್‌ಟಿ), ಸಂಸ್ಕೃತ

ಮಾ.23: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ

ಮಾ.25: ದ್ವಿತೀಯ ಭಾಷೆಗಳಾದ ಇಂಗ್ಲಿಷ್‌, ಕನ್ನಡ

ಮಾ.28: ಗಣಿತ, ಸಮಾಜ ಶಾಸ್ತ್ರ

ಮಾ.30: ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯೂಎಫ್‌ ವಿಷಯಗಳು

ಏ.1: ಅರ್ಥಶಾಸ್ತ್ರ, ಎಂಜಿನಿಯರಿಂಗ್‌ ವಿಷಯಗಳು

ಏ.2: ಸಮಾಜ ವಿಜ್ಞಾನ

Leave a Reply

Your email address will not be published. Required fields are marked *

error: Content is protected !!