ಕೊಡಗು ಜಿಲ್ಲೆಯ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿದ್ದ ಓರ್ವ ವಿದ್ಯಾರ್ಥಿನಿ ತೇರ್ಗಡೆಯಾಗಿದ್ದಾಳೆ. ಶೇ.100 ಫಲಿತಾಂಶ ಪಡೆದಿದ್ದಳು. ಆದರೆ ಇದೀಗ ಅವಳ ಕಗ್ಗೊಲೆ ಆಗಿದೆ. ತಲೆ ಕತ್ತರಿಸಿ ದೇಹವನ್ನು ಬಿಸಾಡಿ ಹೋಗಿರುವ ದುಷ್ಕರ್ಮಿ.
ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಯು.ಎಸ್.ಮೀನಾ ತೇರ್ಗಡೆ ಹೊಂದಿದ ಪರಿಣಾಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದ್ದು, ಗ್ರಾಮದಲ್ಲಿ ಸಂತೋಷಕ್ಕೆ ಕಾರಣ ಆಗಿತ್ತು.
ಸೂರ್ಲಬ್ಬಿ ಶಾಲೆಯಲ್ಲಿ ಏಕೈಕ ವಿದ್ಯಾರ್ಥಿನಿ ಮೀನ ಮಾತ್ರ ಕಲಿಯುತ್ತಿದ್ದಳು. ಏಕೈಕ ವಿದ್ಯಾರ್ಥಿಯನ್ನು ಹೊಂದಿದ್ದ ಈ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನಾ ತೇರ್ಗಡೆಯಾಗಿರುವುದು ಶಿಕ್ಷಣ ಇಲಾಖೆಗೆ ಪುಷ್ಠಿ ನೀಡಿದೆ ಎಂದು ಸಂಭ್ರಮ ಪಡುತ್ತಿರುವಾಗಲೆ ಇದೀಗ ಆಕೆಯ ಹತ್ಯೆ ನಡೆದಿದೆ.
ಆಕೆಯ ಪ್ರಿಯಕರನಿಂದಲೇ ಈ ಹತ್ಯೆ ನಡೆದಿದೆ ಎಂದು ಹಲವರು ಶಂಕೆವ್ಯಕ್ತಪಡಿಸುತ್ತಿದ್ದಾರೆ, ಇನ್ನಷ್ಟೇ ಪೊಲೀಸ್ ತನಿಖೆಯಿಂದ ಸತ್ಯಾ ಸತ್ಯತೆ ಹೊರ ಬರಬೇಕಾಗಿದೆ.
ಅಪ್ರಾಪ್ತ ಬಾಲಕಿ ಹತ್ಯೆ ಬಗೆ ಕೊಡಗು ಪೊಲೀಸ್ ಬಿರುಸಿನ ತನಿಖೆ ಕೈಗೊಂಡಿದ್ದಾರೆ.