SSLCಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಣೆ

ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕಳೆದ 2023-24 ನೇ ವರ್ಷದಲ್ಲಿ ಎಸೆಸೆಲ್ಸಿ ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು.

ಜಿಲ್ಲೆಯ ನಾಲ್ಕು ತಾಲ್ಲೂಕಿನ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಂದು ಜಿಲ್ಲಾಧಿಕಾರಿ ಎ ಬಿ ಬಸವರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್. ಅನುರಾಧ ಮತ್ತು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಉಚಿತ ಲ್ಯಾಪ್ ಟಾಪ್ ವಿತರಿಸಿದರು.

ಜಿಲ್ಲಾ ಹಂತದಲ್ಲಿ ಅತೀ ಹೆಚ್ಚು ಅಂಗಳಿಸಿದ ವಿದ್ಯಾರ್ಥಿಗಳು

ನೆಲಮಂಗಲ ತಾಲ್ಲೂಕಿನ ಚಿನ್ಮಯಿ.ಎಂ ಗಳಿಸಿದ ಅಂಕ 616.

ದೊಡ್ಡಬಳ್ಳಾಪುರ ತಾಲ್ಲೂಕಿನ ದೀಕ್ಷಾ ಜಿ.ಆರ್ ಗಳಿಸಿದ ಅಂಕ 606.

ದೊಡ್ಡಬಳ್ಳಾಪುರ ತಾಲ್ಲೂಕಿನ ರಾಧಾ.ಎಸ್ ಗಳಿಸಿದ ಅಂಕ 605.

ತಾಲ್ಲೂಕು ಹಂತದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು

ದೇವನಹಳ್ಳಿ ತಾಲ್ಲೂಕಿನ ನಿಧಿ.ಎಂ ಗಳಿಸಿದ ಅಂಕ 604, ಮಿತುನ್.ಬಿ ಗಳಿಸಿದ ಅಂಕ 592, ಕಾರ್ತಿಕ್.ಆರ್ ಗಳಿಸಿದ ಅಂಕ 598.

ದೊಡ್ಡಬಳ್ಳಾಪುರ ತಾಲ್ಲೂಕಿನ ತೇಜಸ್ವಿನಿ ಕೆ.ಎಸ್ ಗಳಿಸಿದ ಅಂಕ 592, ಜೀವನ್ ಎ ಗಳಿಸಿದ ಅಂಕ 591, ಶಶಿಕಿರಣ್ ಗಳಿಸಿದ ಅಂಕ 595.

ಹೊಸಕೋಟೆ ತಾಲ್ಲೂಕಿನ ತೇಜಶ್ರೀ ಆರ್.ಎಸ್ ಗಳಿಸಿದ ಅಂಕ 574, ಕೀರ್ತಿಶ್ರೀ ಅರ್ ಗಳಿಸಿದ ಅಂಕ 573, ಮೀನಾಕ್ಷಿ ಪ್ರದೀಪ್ ಲೋಹರ್ ಗಳಿಸಿದ ಅಂಕ 568.

ನೆಲಮಂಗಲ ತಾಲ್ಲೂಕಿನ ಸಂಜನಾ ಕೆ. ಗಳಿಸಿದ ಅಂಕ 584, ಹಂಸವೇಣಿ ಜಿ ಆರ್ ಗಳಿಸಿದ ಅಂಕ 577, ಹೇಮಾ ವಿ ಗಳಿಸಿದ ಅಂಕ 577.

ಈ ಸಂದರ್ಭದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರರಾದ ಬೈಲಾಂಜಿನಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *