RLV ಲ್ಯಾಂಡಿಂಗ್ ಪ್ರಯೋಗದಲ್ಲಿ ಮತ್ತೊಂದು ಯಶಸ್ಸು ಸಾಧಿಸಿದ ಇಸ್ರೋ

ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ನಡೆಸಲಾದ RLV LEX-02 ಲ್ಯಾಂಡಿಂಗ್ ಪ್ರಯೋಗದ ಮೂಲಕ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (RLV) ತಂತ್ರಜ್ಞಾನದ ಕ್ಷೇತ್ರದಲ್ಲಿ ಇಸ್ರೋ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.

ಈ ಕಾರ್ಯಾಚರಣೆಯನ್ನು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಜೊತೆಗೆ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (LPSC) ಮತ್ತು ISRO ಇನರ್ಷಿಯಲ್ ಸಿಸ್ಟಮ್ಸ್ ಯುನಿಟ್ (IISU) ಮೂಲಕ ಸಾಧಿಸಲಾಗಿದೆ.  IAF, ADE, ADRDE ಮತ್ತು CEMILAC ಸೇರಿದಂತೆ ವಿವಿಧ ಏಜೆನ್ಸಿಗಳ ಸಹಯೋಗವು ಈ ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾಗಿದೆ.

‘ಪುಪ್ಪಕ್’ ಆರ್​ಎಲ್​ವಿ ಎಸ್ರೋದ ಮರುಬಳಕೆ ಲಾಂಚ್ ವೆಹಿಕಲ್ (Reusable Launch Vehicle) ಆಗಿದೆ. 21ನೇ ಶತಮಾನದ ಪುಷ್ಪಕ ವಿಮಾನ ಎಂದು ಪ್ರಸಿದ್ಧಿಯಾಗಿರುವ ಪುಷ್ಪಕ್ ರಾಕೆಟ್ ಹಾರಾಟ ಇದಾಗಿದೆ. ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ 4.5 ಕಿಲೋಮೀಟರ್‌ಗಳಷ್ಟು ಎತ್ತರದಿಂದ ಬಿಡುಗಡೆ ಮಾಡಲಾಯಿತು. ನಂತರ SUV ಗಾತ್ರದ ವಿಂಗ್ಡ್ ವೆಹಿಕಲ್ ರನ್‌ವೇಯಲ್ಲಿ ಆರಾಮಾಗಿ ಇಳಿದಿದೆ.

Leave a Reply

Your email address will not be published. Required fields are marked *