RLJP ( ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ ) ರಾಷ್ಟ್ರೀಯ ಅದ್ಯಕ್ಷೆ, ಎನ್ ಡಿ ಎ ರಾಷ್ಟ್ರೀಯ ಕಮಿಟಿ ಸದಸ್ಯೆ ಎಂದು ಹೇಳಿಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಪ್ರಾಫಿಟ್ ಕೊಡಿಸುವುದಾಗಿ ಕೋಟ್ಯಾಂತರ ಹಣ ವಂಚನೆ ಆರೋಪ.
ರಾಜಕಾರಣಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಬಿಲ್ಡ್ ಅಪ್ ಕೊಟ್ಟು ವಂಚನೆ ಮಾಡುತಿದ್ದ ಚಾಲಕಿ ದಂಪತಿಯನ್ನ ಅರೆಸ್ಟ್ ಮಾಡಲಾಗಿದೆ.
ಕೇರಳದಿಂದ ಬೆಂಗಳೂರಿಗೆ ಬಂದು ಜನರಿಗೆ ಪಂಗನಾಮ ಹಾಕುತ್ತಿದ್ದ ಶಿಲ್ಪಾ ಹಾಗೂ ಅಕೆ ಪತಿ ಬಾಬು. ಜ್ಯೋತಿಷ್ಯ ಕಥೆ ಕಟ್ಟಿ, ಹೋಮ ಹವನ ಮಾಡಿಸೋದಾಗಿ ಹೇಳಿ ಆತ್ಮೀಯತೆ ಬೆಳಸಿ ವಂಚನೆ ಮಾಡುತ್ತಿದ್ದ ದಂಪತಿ.
ಬೆಂಗಳೂರಿನಲ್ಲಿ ವಾಸವಾಗಿರುವ ಕೇರಳದ ಮೂಲದವರನ್ನು ಟಾರ್ಗೆಟ್ ಮಾಡಿ ಪ್ರಾರಂಭದಲ್ಲಿ ಸ್ವಲ್ಪ ದಿನ ಹಣ ಕೊಟ್ಟು ನಂಬಿಕೆ ಗಳಿಸಿ ವಂಚನೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಅಮಾಯಕರಿಗೆ ವಂಚನೆ ಮಾಡಲಾಗುತ್ತಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸಿರುವ ಹೆಚ್ ಎಎಲ್ ಠಾಣೆ ಪೊಲೀಸರು