2 ಸಾವಿರ ರೂ ಮುಖಬೆಲೆಯ ನೋಟುಗಳ ವಿನಿಮಯ ಮತ್ತು ಠೇವಣಿ ಇರಿಸಲು ನೀಡಿರುವ ಗಡುವನ್ನು ಅಕ್ಟೋಬರ್ 7ರವರೆಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿಸ್ತರಿಸಿದೆ.
ಈ ಮುಂಚೆ ಸೆಪ್ಟೆಂಬರ್ 30 (ಶನಿವಾರ) ಕೊನೆಯ ದಿನ ಎಂದು ಆರ್‌ಬಿಐ ಹೇಳಿತ್ತು. ಅದನ್ನು ಒಂದ ವಾರದ ಮಟ್ಟಿಗೆ ವಿಸ್ತರಿಸಲಾಗಿದೆ ಎಂದು ಆರ್‌ಬಿಐ ಪ್ರಕಟಣೆ ಹೊರಡಿಸಿದೆ.
ವಿನಿಮಯದ ಕೊನೆಯ ದಿನ ಅಂತ್ಯಗೊಂಡ ಬಳಿಕವೂ 2000 ರೂ ಮುಖಬೆಲೆಯ ಕರೆನ್ಸಿ ನೋಟುಗಳು ಮಾನ್ಯವಾಗಿರುತ್ತವೆ ಎಂದು ಸಹ ಸ್ಪಷ್ಟಪಡಿಸಿದೆ.