
ಇ ಸ್ವತ್ತು ನೀಡಲು ಲಂಚ ಪಡೆದಿದ್ದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹಾದ್ರೀಪುರ ಗ್ರಾಮ ಪಂಚಾಯತಿ ಪಿಡಿಒ ಆಗಿದ್ದ ಶಿವಾನಂದ ಮರಿಕೇರಿ ಅಮಾನತುಗೊಂಡಿದ್ದಾರೆ. ಪ್ರಸ್ತುತ ಸಾಸಲು ಗ್ರಾಮ ಪಂಚಾಯಿತಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದರು.

ಲಂಚ ಸ್ವೀಕರಿಸಿರುವುದನ್ನು ಒಪ್ಪಿಕೊಂಡು ತಪ್ಪಾಯ್ತು ಎಂದು ಕ್ಷಮೆ ಕೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು.
ಹಾದ್ರೀಪುರ ಗ್ರಾಮ ಪಂಚಾಯತಿ ಪಿಡಿಒ ಆಗಿದ್ದ ಶಿವಾನಂದ ಮರಿಕೇರಿ ಅವರು ಇ ಸ್ವತ್ತು ನೀಡಲು ಲಂಚ ಪಡೆದಿರುವ ಕುರಿತು ಪಬ್ಲಿಕ್ ಮಿರ್ಚಿ ವರದಿ ಮಾಡಿತ್ತು.

ಕೂಡಲೇ ಎಚ್ಚೆತ್ತುಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಡಾ.ಎನ್ ಅನುರಾಧಾ ಅವರು ಪಿಡಿಒ ಶಿವಾನಂದ ಮರಿಕೇರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ….
ವರ್ಗಾವಣೆ ಆಗಿದ್ದೇನೆ ಕೂಡಲೇ ಇ ಸ್ವತ್ತು ತೆಗೆದುಕೊಂಡು ಹೋಗಿ ಎಂದು ಹಣಕ್ಕೆ ಬೇಡಿಕೆ ಇಟ್ಟು, 10 ಸಾವಿರ ಹಣವನ್ನ ಸ್ನೇಹಿತನಿಗೆ ಫೋನ್ ಪೇ ಮಾಡಿಸಿಕೊಂಡಿರುವುದಾಗಿ ತಿಳಿದುಬಂದಿತ್ತು.

ಸಾಕ್ಷಿ ಸಮೇತ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಪಿಡಿಒ ಅವರಿಗೆ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರೆ. ಈ ವೇಳೆ ಪಿಡಿಒ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದರು.

ಈ ಮೊದಲು ಕೂಡ ಪಿಡಿಒ ಅವರು ಇ-ಖಾತಾ ಮಾಡಿಕೊಡಲು ಹಾದ್ರಿಪುರ ಗ್ರಾಮಸ್ಥರಿಂದ ಲಂಚ ಪಡೆದು ಖಾತೆ ಮಾಡಿಕೊಡದೇ ಅಲೆದಾಡಿಸಿದ್ದಾರು. ಈ ಕುರಿತು ಶಾಸಕ ಧೀರಜ್ ಮುನಿರಾಜ್ ಅವರ ಗಮನಕ್ಕೆ ಬಂದಿತ್ತು. ಶಾಸಕರು ಈ ಪಿಡಿಒ ಅವರಿಗೆ ವಾರ್ನ್ ಕೂಡ ಮಾಡಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಈ ಪಿಡಿಒ ಮತ್ತೆ ಲಂಚದ ಹುತ್ತಕ್ಕೆ ಕೈಹಾಕುತ್ತಲೇ ಬಂದಿದ್ದರು.