PTCL ಕಾಯ್ದೆ ವಿಚಾರ: ಪ್ರಜಾ ವಿಮೋಚನಾ ಚಳವಳಿ ಸಂಘಟನೆ ವತಿಯಿಂದ ಜ.6 ರಿಂದ ನಿರತಂರ ಪ್ರತಿಭಟನೆ

ರಾಜ್ಯ ಸರ್ಕಾರ PTCL ಕಾಯ್ದೆಗೆ 2023ದಲ್ಲಿ ತಿದ್ದುಪಡಿ ಮಾಡಿದ್ದರೂ ಸಹ ಉಚ್ಚನ್ಯಾಯಲಯ ಕಾಯ್ದೆ ವಿರುದ್ಧವಾಗಿ ಆದೇಶಗಳನ್ನು ಮಾಡುತ್ತಿರುವುದರಿಂದ ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಹಿರಿಯ ನ್ಯಾಯವಾದಿಗಳ ತಂಡ ರಚಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಮತ್ತು ಆದೇಶವಾಗುವ ಬಗ್ಗೆ ಕ್ರಮ ವಹಿಸುವಂತೆ ಒತ್ತಾಯಿಸಿ ಜನವರಿ 06 ರಿಂದ ನಿರಂತರ ಪ್ರತಿಭಟನೆ ನಡೆಸುವುದಾಗಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಆನೇಕಲ್ ಕೃಷ್ಣಪ್ಪ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘದಲ್ಲಿ ಪ್ರಜಾ ವಿಮೋಚನಾ ಚಳವಳಿ (ರಿ) PVC ರಾಜ್ಯ ಸಮಿತಿ – ಕರ್ನಾಟಕ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮುಖ್ಯವಾಗಿ PTCL ಕಾಯ್ದೆಯು ತುಳಿತಕ್ಕೊಳಗಾದ ಜನಾಂಗದ ಅಭಿವೃದ್ಧಿ ಮತ್ತು ಉದ್ದಾರಕೋಸ್ಕರ ಸರ್ಕಾರ 1978-79ರಲ್ಲಿ ಕಾಯ್ದೆ ಜಾರಿಗೆ ತಂದ ನಂತರ SC/ST ಜನರಿಗೆ ಮಾಂಜೂರಾದ ಜಮೀನುಗಳನ್ನು ಪರಬಾರೆ ಮಾಡಲು ಸರ್ಕಾರದ ಪೂರ್ವನುಮತಿ ಕಡ್ಡಾಯ ಎಂಬ ಷರತ್ತು ಇತ್ತು. ಕಾಯ್ದೆ ಉಲ್ಲಂಘಿಸಿ ಭೂಮಿ ಪರಬಾರೆ ಅಗಿದ್ದಲ್ಲಿ ಮರು ಮಂಜೂರಾತಿ ಕೋರಿ ಮಂಜೂರುದಾರರು ACರವರಿಗೆ ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿಲ್ಲ. ಆದರೆ, ನೆಕ್ಕಂಟಿ ರಾಮಲಕ್ಷ್ಮೀ V/S ಕರ್ನಾಟಕ ಸರ್ಕಾರದ ಪ್ರಕರಣ ಸಂಖ್ಯೆ APPEAL NO. 139002009 ದಿ: 26-10-2017ರಲ್ಲಿ ಸರ್ವೋಚ್ಚ ನ್ಯಾಯಲಯ “ಸಮುಚಿತ ಸಮಯದೊಳಗೆ” ಅರ್ಜಿ ಸಲ್ಲಿಸಬೇಕೆಂದು ಆದೇಶ ಮಾಡಿದ್ದು ನಿರ್ದಿಷ್ಟವಾಗಿ ಇಂತಿಷ್ಟು ವರ್ಷಗಳು ಎಂದು ಹೇಳದಿದ್ದರು ಈ ಆದೇಶದ ನಂತರ AC, DC ಉಚ್ಚನ್ಯಾಯಗಳಲ್ಲಿ ದಾಖಲಿಸಿದ್ದ ಸಾವಿರಾರು ಪ್ರಕರಣಗಳು ಕಾಯ್ದೆ ವಿರುದ್ಧವಾಗಿ ಆದೇಶಗಳಾಗಿರುವುದನ್ನು ಖಂಡಿಸಿ ಕಾಲಮಿತಿ ರದ್ದುಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 2022ರಲ್ಲಿ ರಾಜ್ಯಾದ್ಯಾಂತ ದಲಿತ ಚಳವಳಿಗಾರರು ಹೋರಟಗಳನ್ನು ನಡೆಸಲಾಗಿತ್ತು ಎಂದು ಹೇಳಿದರು.

ಪ್ರಜಾವಿಮೋಚನಾ ಚಳುವಳಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ದೇವರಾಜ್ ಮಾತನಾಡಿ, ಕ್ರಾಂಗೆಸ್ ಪಕ್ಷದ ಸರ್ಕಾರ ರಚನೆಯಾಗಿ  ಸಿದ್ದಾರಾಮಯ್ಯ ಮುಖ್ಯಮಂತ್ರಿಗಳಾದ ನಂತರ ಕಾಲಮಿತಿ ಇಲ್ಲವೆಂದು PTCL ಕಾಯ್ದೆಗೆ ತಿದ್ದುಪಡಿಯನ್ನು ಮೊದಲ ಸಂಪುಟದ ಸಭೆಯಲ್ಲಿ ಮಂಡಿಸಿ ದಿನಾಂಕ : 27-07-2023ರಲ್ಲಿ ಜಾರಿಗೊಳಿಸಿದರು ಇದರಿಂದ ರಾಜ್ಯದ ಲಕ್ಷಾಂತರ SC/ST ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆಯ ಮಾರ್ಗ ಕಲ್ಪಿಸಿದ ಸ್ವಾಗತಾರ್ಹ ವಿಷಯವೇ ಆಗಿತ್ತು ಎಂದರು.

ರಾಜ್ಯ ಸರ್ಕಾರ PTCL ಕಾಯ್ದೆಗೆ ಕಾಲಮಿತಿ ಇಲ್ಲ ಎಂದು ತಿದ್ದುಪಡಿ ತಂದಿರುವುದನ್ನು ಉಚ್ಚನ್ಯಾಯಲಯ ಪರಿಗಣಿಸದೆ ಕಾಯ್ದೆ ವಿರುದ್ಧವಾಗಿ 2024 ನವಂಬರ್ ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಆದೇಶಗಳನ್ನು ಮಾಡಿದ್ದು ಪ್ರತಿ ದಿನ ಹತ್ತಾರು ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಲಯದ ನೆಕ್ಕಂಟಿ ರಾಮಲಕ್ಷ್ಮೀ V/S ಕರ್ನಾಟಕ ಸರ್ಕಾರದ ತಿರ್ಪಿನ ಆದೇಶ ಉಲ್ಲೇಖಿಸಿ ವಜಾ ಮಾಡಲಾಗುತ್ತಿದೆ. ಆದ್ದರಿಂದ ಉಚ್ಚನ್ಯಾಯಲಯ ಕಾಯ್ದೆ ವಿರುದ್ಧವಾಗಿ ಆದೇಶಗಳನ್ನು ಮಾಡುತ್ತಿರುವುದರಿಂದ ರಾಜ್ಯದ ಲಕ್ಷಾಂತರ SC/ST ಜಾತಿಗಳ ಕುಟುಂಬಗಳು ಬೀದಿಪಾಲಾಗುವ ಸನ್ನವೇಶ ಸೃಷ್ಟಿಯಾಗಿರುವುದನ್ನು  ಮುಖ್ಯಮಂತ್ರಿಗಳು, ಕಂದಾಯ ಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಹಿರಿಯ ನ್ಯಾಯವಾದಿಗಳ ತಂಡ ರಚಿಸಿ ಶಿಘ್ರವಾಗಿ ಸರ್ವೋಚ್ಚ ನ್ಯಾಯಲಯದಲ್ಲಿ REVIEW PETITION ಅನ್ನು ಸರ್ಕಾರದ ಮೂಲಕ ಹಾಕಲು ವ್ಯವಸ್ಥೆ ಮಾಡಬೇಕು ಎಂದು ಸರ್ಕಾರವನ್ನು PVC ಒತ್ತಾಯಿಸುತ್ತದೆ ಎಂದರು.

ಮೀಸಲು ಕ್ಷೇತ್ರಗಳಲ್ಲಿ ಗೆದ್ದಿರುವ ಎಲ್ಲಾ ಮಂತ್ರಿಗಳು, ಶಾಸಕರ ಮೇಲೆ ಒತ್ತಡ ತರುವ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು ಹಾಗೂ  ಲೋಕಜ್ಞಾನವಿಲ್ಲದ ಶಿಕ್ಷಣವಂಚಿತ ಸಮುದಾಯದವರ ಆರ್ಥಿಕಸಬಲತೆ ಮತ್ತು ಜೀವನೋಪಾಯದ ಉದ್ದೇಶದೊಂದಿಗೆ ಈ ಯೋಜನೆ  ಜಾರಿಗೆ ತರಲಾಗಿದೆ ಇದಕ್ಕೆ ವಿರುದ್ದವಾಗಿ ಹಲವಾರು ತಿದ್ದುಪಡಿಗಳು ಬಂದಿರುವ ಹಿನ್ನಲೆ  ತರಾತುರಿಯ ಕೋಟ್೯ ನಿರ್ಧಾರ ನಮ್ಮಂತಹ ಸಮುದಾಯಗಳನ್ನು ಹಿಂದೆಯೇ ಉಳಿಯುವಂತೆ ಮಾಡುತ್ತಿದೆ ಹಾಗಾಗಿ ಸರ್ಕಾರ ಒಂದು ತನಿಖೆ ಮಾಡಿ ಮೇಲ್ಮನವಿ ಮಾಡಿ ತಿದ್ದುಪಡಿ ಮಾಡಬೇಕು ,ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳುವಳಿ ಸಂಘಟನೆಯ ಪದಾಧಿಕಾರಿಗಳಾದ ಮಮತಾ , ಶ್ರೀನಿವಾಸ್, ಹೆಬ್ಬಾಳ ಮುನಿರಾಜು, ರವಿ ಸೇರಿದಂತೆ ಸಂಘಟನಾ ಸದಸ್ಯರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಅಧಿಕಾರಿಗಳಲ್ಲಿ ಮಾಹಿತಿ ಕೊರತೆಯಿಂದ ಆರ್‌ಟಿಐ ಅರ್ಜಿಗಳ ವಿಲೇವಾರಿ ವಿಳಂಬ- ಮಾಹಿತಿ ಆಯುಕ್ತ ಹರೀಶ್ ಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗು ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ…

11 minutes ago

ಧರ್ಮಸ್ಥಳ ಕೇಸ್ ವಿಚಾರ: ತನಿಖೆ ಬೇಗ ಮುಗಿಸಿ ನ್ಯಾಯ ಕೊಡಿಸಿ ಭಾರತೀಯ ಪರಂಪರೆಯನ್ನ ಉಳಿಸಬೇಕು- ಸಚಿವ ವಿ.ಸೋಮಣ್ಣ

ಧರ್ಮಸ್ಥಳ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿ, ಧರ್ಮಸ್ಥಳ ವಿಶ್ವದಲ್ಲೇ ಪವಿತ್ರವಾದ ಸ್ಥಳ. ಅವಷೇಶ ಮತ್ತೊಂದು…

47 minutes ago

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ 20ನೇ ಕಂತಿನ ಹಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ…

1 hour ago

ಪ್ರಜ್ವಲ್ ರೇವಣ್ಣ ಕೇಸ್: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಜೀವನ‌ಪರ್ಯಂತ ಸೆರೆಮನೆ ವಾಸ

ಮೈಸೂರಿನ ಕೆಆರ್​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ದೋಷಿ ಎಂದು…

3 hours ago

ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…

12 hours ago

ಪ್ರಥಮ್ ಜೀವ ಬೆದರಿಕೆ ಪ್ರಕರಣ: ವಿಚಾರಣೆ ಬಳಿಕ ರಕ್ಷಕ್ ಬುಲೆಟ್ ಫಸ್ಟ್ ರಿಯಾಕ್ಟ್

ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನ್ನು ರಕ್ಷಕ್ ಬುಲೆಟ್ ಗೆ ನೀಡಲಾಗುತ್ತು.…

22 hours ago