ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹ 4 ಹೆಚ್ಚಳವಾಗಲಿದ್ದು, ಇದರಲ್ಲಿ ಸರ್ಕಾರ ಅಥವಾ ಕೆಎಂಎಫ್ ಸಂಸ್ಥೆಗೆ ಲಾಭ ಗಳಿಕೆ ಮಾಡಿಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹ 46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾಡಿನ ಲಕ್ಷಾಂತರ ಹೈನುಗಾರರ ಬದುಕಿಗೆ ಬಲ ತುಂಬುವ ಏಕೈಕ ಉದ್ದೇಶದ ಈ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲುತ್ತೀರೆಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಲಕ್ಷಾಂತರ ಹೈನುಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಹಾಗೂ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಪ್ರಸ್ತುತ ದರ ಏರಿಕೆ ನಿರ್ಧಾರವನ್ನು ರಾಜ್ಯ ಸರ್ಕಾರವು ಕೈಗೊಂಡಿದೆ. ರಾಷ್ಟ್ರದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಅತ್ಯಂತ ಕಡಿಮೆಯಿದೆ. ರಾಜಧಾನಿ ಸೇರಿದಂತೆ ಪ್ರಮುಖ ರಾಜ್ಯಗಳ ಹಾಲಿನ ದರ ಪಟ್ಟಿ ಈ ಕೆಳಗಿನಂತಿದೆ.
ರಾಜ್ಯ – ಮಾರಾಟ ದರ
ಕೇರಳ- 52
ಗುಜರಾತ್- 53
ದೆಹಲಿ- 55
ಮಹಾರಾಷ್ಟ್ರ- 52
ತೆಲಂಗಾಣ- 58
ಕರ್ನಾಟಕ- 46
ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಹೈನುಗಾರರ ನೆರವಿಗೆ ರಾಜ್ಯ ಸರ್ಕಾರವು ಧಾವಿಸಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ಬೆಲೆ ಏರಿಕೆ ಮಾಡಿದೆ. ಕೆಎಂಎಫ್’ನ ನಂದಿನಿ ಹಾಲಿನ ಬೆಲೆಗೆ ಹೋಲಿಸಿದರೆ ಹೊರರಾಜ್ಯಗಳ ಹಾಲು ಒಕ್ಕೂಟಗಳು ಮಾರಾಟ ಮಾಡುವ ದರ ಹೆಚ್ಚಿನದ್ದಾಗಿದೆ.
ಶುದ್ಧ ಹಾಗೂ ಗುಣಮಟ್ಟದ ದೃಷ್ಟಿಯಲ್ಲಿ ನಂದಿನಿ ಹಾಲು ಹಾಗೂ ಉತ್ಪನ್ನಗಳು ದೇಶದಲ್ಲೇ ಅತಿಹೆಚ್ಚು ಶ್ಲಾಘನೆಗೆ ಒಳಪಟ್ಟಿವೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ನಂದಿನಿ ಹಾಲು ಹಾಗೂ ಇತರೆ ಉತ್ಪನ್ನಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದ ರಾಜ್ಯದ ಹೈನುಗಾರರಿಗೆ ಉತ್ತೇಜನ ಸಿಗುತ್ತಿದ್ದು, ಇದೀಗ ಸಣ್ಣ ಪ್ರಮಾಣದಲ್ಲಿ ಏರಿಕೆಯಾದ ಹಾಲಿನ ದರವು ನೇರವಾಗಿ ಹೈನುಗಾರರ ಕೈಸೇರುತ್ತಿರುವುದು ಪ್ರೋತ್ಸಾಹಕರವಾಗಿದೆ.
ಹೊರರಾಜ್ಯಗಳ ಹಾಲಿನ ಮಾರಾಟ ದರಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ಮಾರಾಟ ದರ ಈಗಲೂ ಅತ್ಯಂತ ಕಡಿಮೆ
ರಾಜ್ಯ – ಮಹಾಮಂಡಲ/ಒಕ್ಕೂಟ – ಮಾರಾಟ ದರ
ಅಸ್ಸಾಂ – ವಮುಲ್ – 60
ಹರಿಯಾಣ -ಅಂಬಲ – 56
ಆಂಧ್ರಪ್ರದೇಶ – ಗುಂಟೂರು – 60
ರಾಜಸ್ತಾನ – ಜೈಪುರ – 50
ಮಧ್ಯಪ್ರದೇಶ – ಭೂಪಾಲ್ – 52
ಪಂಜಾಬ್ – ರೋಪರ್ – 56
ಉತ್ತರಪ್ರದೇಶ – ಲಖನೌ – 56
ಮಹಾರಾಷ್ಟ್ರ- ಕೊಲ್ಲಾಪುರ – 52
ಗುಜರಾತ್ – ಬನಸ್ಕಾಂತ – 53
ಕೇರಳ – ಮಲಬಾರ್ – 52
ಕರ್ನಾಟಕ – ಕೆಎಂಎಫ್ – 42