
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ಆವರಣದಲ್ಲಿ ಡಿವೈಎಸ್ಪಿ ಪಾಂಡುರಂಗ ನೇತ್ವದಲ್ಲಿ ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗದ ಎಲ್ಲಾ ಠಾಣೆಗಳ ಎಂಒಬಿಗಳ ಪರೇಡ್ ನಡೆಯಿತು.
ಸಾವಿರಕ್ಕೂ ಹೆಚ್ಚು ಎಂಒಬಿಗಳ ಪೈಕಿ ಕೇವಲ 117 ಎಂಒಬಿಗಳು ಮಾತ್ರ ಇಂದಿನ ನಡೆದ ಪರೇಡ್ ನಲ್ಲಿ ಇದ್ದರು….
ಈ ವೇಳೆ ಡಿವೈಎಸ್ಪಿ ಪಾಂಡುರಂಗ ಮಾತನಾಡಿ, ರಾತ್ರಿ ಕಳ್ಳತನ ಮಾಡಿ ಬೆಳಿಗ್ಗೆ ಡ್ಯೂಟಿ ಅಂತ ಹೇಳಿದ್ರೆ ಪೋಲಿಸರು ಸುಮ್ಮನಿರಲ್ಲ. ಹಳೇ ಕಳ್ಳರ ಮೇಲೂ ಪೊಲೀಸರ ನಿಗಾ ಇದ್ದೆ ಇರುತ್ತದೆ ಎಂದರು.
ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬೇಡಿ. ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡಿ. ಸಮಾಜದಲ್ಲಿ ಗೌರವಯುತವಾಗಿ ಬಾಳಲು ಪ್ರಯತ್ನಿಸಬೇಕು. ಅದಕ್ಕೆ ನಾವು ಕೂಡ ಸಹಾಯ ಮಾಡುತ್ತೇವೆ ಎಂದರು.

ಕಳ್ಳರ ಬಗ್ಗೆ ಮಾಹಿತಿ ದೊರೆತರೆ ಪೊಲೀಸ್ ಠಾಣೆಗೆ ತಿಳಿಸುವಂತೆ ಹಳೇ ಕಳ್ಳರಿಗೆ ಸಲಹೆ ನೀಡಿದರು. ಸಮಾಜದ ಶಾಂತಿಗೆ ಧಕ್ಕೆಯಾಗದಂತೆ ಇರಬೇಕು. ಯಾವುದೇ ಅಕ್ರಮ ಕೆಲಸದಲ್ಲಿ ಭಾಗಿಯಾದರೆ ಅವರ ಮೇಲೆ ಕ್ರಮವಹಿಸಲಾಗುತ್ತದೆ ಎಂದರು.
ಈ ವೇಳೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಗಳಾದ ಶಶಿಧರ್, ಪ್ರಶಾಂತ್, ಕಲ್ಲಪ್ಪ, ಸಿಬ್ಬಂದಿ ಇದ್ದರು.