KSRTC: ಅಪಘಾತ‌ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಚಿಕ್ಕಬಳ್ಳಾಪುರ ವಿಭಾಗದ ದೊಡ್ಡಬಳ್ಳಾಪುರ ಘಟಕದಲ್ಲಿ ಕಳೆದ ಐದು ವರ್ಷಗಳಿಂದ ಅಪಘಾತ ರಹಿತವಾಗಿ ಚಾಲನೆ‌ ಮಾಡಿರುವ ಚಾಲಕರಿಗೆ ಬೆಳ್ಳಿ ಪದಕ ಹಾಗೂ ನಗದು ಪುರಸ್ಕಾರ ವಿತರಣೆ ಮಾಡಿ ಗೌರವಿಸಲಾಯಿತು.

ದೊಡ್ಡಬಳ್ಳಾಪುರ ಘಟಕದ 10 ಮಂದಿ ಚಾಲಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪಡೆದ ಹೆಸರು ಈ ಕೆಳಕಂಡಂತಿದೆ.

1. ಕೃಷ್ಣಪ್ಪ ಕೆ ಎನ್ (2350)

2. ನಿಂಗಪ್ಪ ಗುಡ್ಡದಕೇರಿ (2557)

3. ರಾಮಕೃಷ್ಣ ಜೆ (3832)

4. ಬಸವರಾಜು (3852)

5. ನಾರಾಯಣಸ್ವಾಮಿ ಎಂ ಎನ್ (4166)

6. ರಂಜಿತ್ ಕುಮಾರ್ (7977)

7. ರಾಮಾಂಜಿನಪ್ಪ ಕೆ (18417)

8. ಶ್ರೀನಿವಾಸ ಎಂ (27056)

9. ವಿಜಯ ಕುಮಾರ್ ಎಂ (534)

10. ಮಹಾಂತೇಶ್ ಗದ್ದಿ (545)

ಇಂದು ಚಿಕ್ಕಬಳ್ಳಾಪುರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಿ ಪದಕ ವಿತರಣಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ರವೀಂದ್ರ ಅವರಿಂದ ಪ್ರಶಸ್ತಿ ಪ್ರದಾನ ನಡೆಯಿತು.

ವೈದ್ಯನ ಜಾಗರೂಕತೆಯಿಂದ ಒಬ್ಬ ರೋಗಿಯ ಪ್ರಾಣ ಉಳಿಸಬಹುದು, ಆದರೆ ಬಸ್‌ ಚಾಲಕ ಕೈಯಲ್ಲಿ ನೂರಾರು ಮಂದಿ ಪ್ರಯಾಣಿಕರ ಪ್ರಾಣ ಇರುತ್ತದೆ. ಪ್ರತಿಯೊಬ್ಬರ ಪ್ರಾಣ ತನ್ನ ಪ್ರಾಣದಂತೆ ಭಾವಿಸಿ ಎಚ್ಚರಿಕೆಯಿಂದ ಬಸ್ ಚಾಲನೆ ಮಾಡುತ್ತಾನೆ. ಅಂತಹವರಿಗೆ ನಾವು ಗೌರವಿಸಲೇಬೇಕು. ಇವರ ಸಾಧನೆ ಇತರೆ ನೌಕರರಿಗೆ ಮಾದರಿಯಾಗಬೇಕು. ಚಾಲಕ ವೃತ್ತಿ ಎನ್ನುವುದು ಒಂದು ಜವಾಬ್ಧಾರಿ ಕೆಲಸ, ಇದನ್ನು ಸಮರ್ಥವಾಗಿ ನಿಭಾಯಿಸಬೇಕು.

ಈ ವೇಳೆ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಧಿಕಾರಿ ಹಿಮವರ್ಧನ ನಾಯ್ಡು, ವಿಭಾಗೀಯ ಯಾಂತ್ರಿಕ ಅಭಿಯಂತರಾದ ಎಂ.ಸಿ.ಕೆಳಗೇರಿ, ವಿಭಾಗೀಯ ಸಂಚಾರ ಅಧಿಕಾರಿ ಮಂಜುನಾಥ, ಉಗ್ರಾಣಾಧಿಕಾರಿ ವೆಂಕಟರಮಣಪ್ಪ, ದೊಡ್ಡಬಳ್ಳಾಪುರ ಘಟಕದ ವ್ಯವಸ್ಥಾಪಕ ಸಂತೋಷ್ ಎಸ್.ಆರ್ ಸೇರಿದಂತೆ ವಿಭಾಗದ ಎಲ್ಲಾ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು, ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *