ತುಮಕೂರಿನ ಕೆಪಿಟಿಸಿಎಲ್ ಚೀಫ್ ಎಂಜಿನಿಯರ್ ನಾಗರಾಜನ್ ಅವರು 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತುಮಕೂರಿನ ಬಿಹೆಚ್ ರಸ್ತೆ ಬಳಿಯಿರುವ ಕೆಪಿಟಿಸಿಎಲ್ ಕಚೇರಿ.
ಪವರ್ ಲೈನ್ ಎಳೆಯಲು ಅನುಮತಿಗಾಗಿ ಕಂಟ್ರಾಕ್ಟರ್ ಗೆ 1 ಲಕ್ಷ ಲಂಚ ಬೇಡಿಕೆ ಇಟ್ಟಿದ್ದ ಕೆಪಿಟಿಸಿಎಲ್ ಚೀಫ್ ಎಂಜಿನಿಯರ್ ನಾಗರಾಜನ್. ಆಗಸ್ಟ್ 4 ರಂದು 50 ಸಾವಿರ ಅಡ್ವಾನ್ಸ್ ಪಡೆದಿದ್ದ ನಾಗರಾಜನ್. ಮತ್ತೆ ಉಳಿದ 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತುಮಕೂರು ಲೋಕಾಯುಕ್ತ SP ಬಾಷಾ ನೇತೃತ್ವದಲ್ಲಿ ಟ್ರಾಪ್ ಮಾಡಲಾಗಿದೆ. ಆರೋಪಿ ಚೀಫ್ ಎಂಜಿನಿಯರ್ ನಾಗರಾಜನ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತುಮಕೂರು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.