ತಿರುಪತಿ-ಕರ್ನಾಟಕ ಪ್ರವಾಸ ಬೆಳೆಸಲು ಐಆರ್‌ಟಿಸಿ ಮತ್ತೊಂದು ಹೊಸ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯ ಮಾಡಿದೆ. ಕರ್ನಾಟಕದಲ್ಲಿರುವ ಸುಂದರವಾದ ತಾಣಗಳನ್ನು ನೋಡಬೇಕು ಎಂದು ಬಯಸುವವರು IRCTCಯಲ್ಲಿ ಮಾಹಿತಿಯನ್ನು ಕಲೆಹಾಕಬಹುದಾಗಿದೆ. ತಿರುಪತಿ – ಕರ್ನಾಟಕ ಪ್ಯಾಕೇಜ್‌ನಲ್ಲಿ ಕರ್ನಾಟಕದ ಆಧ್ಯಾತ್ಮಿಕ ಇತಿಹಾಸವುಳ್ಳ ಸುಂದರ ತಾಣಗಳಾದ, ಗೋಕರ್ಣ, ಕೊಲ್ಲೂರು, ಮುರುಡೇಶ್ವರ, ಶೃಂಗೇರಿ, ಉಡುಪಿಯಂತಹ ಸ್ಥಳಗಳು ಪಟ್ಟಿಯಲ್ಲಿವೆ. ಇವೆಲ್ಲವೂ ಆಧ್ಯಾತ್ಮಿಕ ಮತ್ತು ಮನರಂಜನಾತ್ಮಕ ತಾಣಗಳಾಗಿವೆ.
ಟೂರ್ ಪ್ಯಾಕೇಜ್ ವಿವರ:
ಈ ಪ್ರವಾಸವು 2023ರ ಜನವರಿ 17 ರಂದು ಪ್ರಾರಂಭ ಆಗುತ್ತದೆ. ಅಲ್ಲದೆ ವಾರದ ಪ್ರತಿ ಮಂಗಳವಾರದಂದು ಈ ಟೂರ್ ಪ್ಯಾಕೇಜ್ ಇರುತ್ತದೆ. ಈ ಪ್ಯಾಕೇಜ್‌ನ ಪ್ರಕಾರ 5 ರಾತ್ರಿ ಮತ್ತು 6 ದಿನಗಳ ದೀರ್ಘ ಪ್ರಯಾಣ ಆಗಿರುತ್ತದೆ. ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ದೇವಾಲಯ, ಸೆಂಟ್ ಮೇರಿಸ್ ಐಲ್ಯಾಂಡ್, ಮಲ್ಪೆ ಬೀಚ್, ಶಾರದಾಂಬ ದೇವಾಲಯ, ಕೊಲ್ಲೂರು ಮುಕಾಂಬಿಕ ದೇವಿ ದೇವಾಲಯ, ಮುರುಡೇಶ್ವರ ದೇವಾಲಯ, ಜೋಗ ಜಲಪಾತ, ಗೋಕರ್ಣ, ಗೋಕರ್ಣ ಬೀಚ್, ಮಂಗಳೂರಿನ ದೇವಾಲಯಗಳು, ಕೋಟೆಗಳನ್ನು ನೋಡಿಕೊಂಡು ರಾತ್ರಿ ರೈಲಿನಲ್ಲಿ ಹಿಂದಿರುಗಬಹುದಾಗಿದೆ.
ಟ್ಯೂರ್ ಪ್ಯಾಕೇಜ್ ಬುಕ್ ವೆಚ್ಚದ ವಿವರ
ಪ್ಯಾಕೇಜ್‌ನ್ನು ಬುಕ್ ಮಾಡಲು ಪ್ರತಿಯೊಬ್ಬರಿಗೆ 33,280 ರೂಪಾಯಿಗಳು ವೆಚ್ಚವಾಗುತ್ತದೆ. ಮತ್ತು ಇಬ್ಬರು ಒಟ್ಟಿಗೆ ಪ್ರಯಾಣಿಸಿದರೆ ಒಬ್ಬರಿಗೆ 18,570 ರೂಪಾಯಿಗಳು ವೆಚ್ಚ ತಗುಲುತ್ತದೆ. ಇದು ಕಂಪರ್ಟ್ ಕ್ಲಾಸ್‌ನ ಟಿಕೆಟ್ ಬೆಲೆಯಾಗಿದೆ. ಇಲ್ಲದಿದ್ದರೆ ನೀವು ಸ್ಟಾಂಡರ್ಡ್ ಕ್ಲಾಸ್‌ನಲ್ಲಿ ಪ್ರಯಾಣ ಮಾಡಲು ಬಯಸಿದರೆ ಒಬ್ಬರಿಗೆ 30,890 ರೂಪಾಯಿಗಳು ಆಗುತ್ತದೆ. ಇಬ್ಬರು ಒಟ್ಟಿಗೆ ಪ್ರಯಾಣ ಮಾಡಿದರೆ ಒಬ್ಬರಿಗೆ 16,180 ರೂಪಾಯಿ ಆಗುತ್ತದೆ. ಇನ್ನು 5 ರಿಂದ 11 ವರ್ಷದ ಮಕ್ಕಳಿಗೆ 7,330 ರೂಪಾಯಿ ನಿಗದಿ ಮಾಡಲಾಗಿದೆ. ಊಟ, ವಸತಿ ಎಲ್ಲವೂ ಪ್ಯಾಕೇಜ್‌ನಲ್ಲಿ ಒಳಗೊಂಡಿರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು IRCTCಯ ಅಧಿಕೃತ ವೆಬ್‌ಸೈಟಿಗೆ ಹೋಗಿ ಪ್ಯಾಕೇಜ್‌ನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…
ಮಂಗಳವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಅವರು ಉಪರಾಷ್ಟ್ರಪತಿ…
ದೊಡ್ಡಬಳ್ಳಾಪುರ : 40 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನ ಸರ್ಕಾರದ ವಶಕ್ಕೆ ಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜುರವರ…
ಆಹಾರ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪನವರು ಅನುಭವಿ, ಹಿರಿಯ ರಾಜಕಾರಣಿ. ಕೇಂದ್ರ, ರಾಜ್ಯ…