IPL 2025: ಶುಭಾರಂಭ ಮಾಡಿದ RCB

ಕೋಲ್ಕತ್ತಾ: ಆರ್ ಸಿಬಿ ತಂಡವು ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದ ಐಪಿಲ್ 2025 ಮೊದಲ ಪಂದ್ಯವನ್ನು ಗೆದ್ದು ಬೀಗಿತು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮಾಜಿ ಚಾಂಪಿಯನ್ ಕೋಲ್ಕತ್ತಾ ತಂಡವು, ಉತ್ತಮ ಆರಂಭ ಮಾಡಿತು. ದಿಕಾಕ್ (4) ಬೇಗ ವಿಕೆಟ್ ಹೋದರು. ನಂತರ ಬ್ಯಾಟಿಂಗ್ ಗೆ ಬಂದ ನಾಯಕ ರಹಾನೆ (56) ಮತ್ತು ನರೆನ್ (44) ರನ್ ಗಳಿಸಿ ಫೆವಿಲಿಯನ್ ಸೇರಿದರು. ನಂತರ ಬ್ಯಾಟಿಂಗ್ ಗೆ ಬಂದ ಯಾವ ಪ್ಲೇಯರ್ ಸಹ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ಉಳಿಯಲಿಲ್ಲ. ವೆಂಕಟೇಶ್ ಅಯ್ಯರ್ (6), ರಘುವಂಶಿ (30), ರಿಂಕು ಸಿಂಗ್ (12),
ರಸೆಲ್ (4) ಕೃನಲ್ ಪಾಂಡ್ಯ 3 ವಿಕೆಟ್ ತೆಗೆದು ಮಿಂಚಿದರು, ಹಾಜಲ್ ವುಡ್ 2 ವಿಕೆಟ್ ಪಡೆದುಕೊಂಡರು.

ಸಾದಾರಣ ಗುರಿ (174) ಬೆನ್ನಟ್ಟಿದ ಆರ್ ಸಿಬಿ ತಂಡವು ಉತ್ತಮ ಆರಂಭ ದೊರೆಯಿತು. ಕೊಹ್ಲಿ (59*) ಮತ್ತು ಸಾಲ್ಟ್ (56) ಇಬ್ಬರು ಸೇರಿ 95 ರನ್ ಗಳ ಜೊತೆಯಾಟ ಆಡಿದರು. ನಂತರ ಕ್ರಿಸ್ ಗೆ ಬಂದ ಪಡಿಕಲ್ (10), ನಾಯಕ ಪಟಿದಾರ್ (34) ಮತ್ತು ಲಿವಿಂಗ್ ಸ್ಟನ್ (15) ಉತ್ತಮ ಬ್ಯಾಟಿಂಗ್ ನೆರವಿನಿಂದ 16.2 ಓವರ್ ಗೆ ಟಾರ್ಗೆಟ್ ಚೇಸ್ ಮಾಡಿದರು.

3 ವಿಕೆಟ್ ತೆಗೆದು ಮಿಂಚಿದ ಕೃನಲ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Leave a Reply

Your email address will not be published. Required fields are marked *