ಐನೂರು ಮುಖಬೆಲೆಯ 51,95,900 ರೂ. ಭಾರತೀಯ ಕರೆನ್ಸಿ ಹಾಗೂ 50,79,967 ರೂ. ಮೌಲ್ಯದ 824.67 ಗ್ರಾಂ. ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಇಬ್ಬರು ಪ್ರಯಾಣಿಕರು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆ.29ರ ರಾತ್ರಿ ಹಾಗೂ ಮಾ.1ರ ಮುಂಜಾನೆಯಲ್ಲಿ ಇಬ್ಬರು ಪ್ರಯಾಣಿಕರನ್ನ ತಪಾಸಣೆ ನಡೆಸಿದಾಗ ಹಣ ಮತ್ತು ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಒಡಿ-242 ವಿಮಾನದ ಮೂಲಕ ಕೌಲಾಲಂಪುರ್‌ಗೆ INR 500 ಮುಖಬೆಲೆಯ ರೂ.51,95,500 ಮೊತ್ತದ ಭಾರತೀಯ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಭಾರತೀಯ ನಾಗರಿಕರೊಬ್ಬರು ಪ್ರಯಾಣಿಕರ ಚೆಕ್ ಇನ್ ಬ್ಯಾಗೇಜ್‌ನಲ್ಲಿ ಹಣವನ್ನ ಮರೆಮಾಚಿದ್ದರು. ತಪಾಸಣೆ ನಡೆಸಿ ಅದನ್ನ ಕೂಡಲೇ ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಘಟನೆಯಲ್ಲಿ, ಇಂಡಿಗೋ ಫ್ಲೈಟ್ 6E-1486 ರಲ್ಲಿ ದುಬೈನಿಂದ ಆಗಮಿಸಿದ ಥೈಲ್ಯಾಂಡ್ ನ ಅಂತಾರಾಷ್ಟ್ರೀಯ ಪ್ರಯಾಣಿಕ, ವಿದೇಶಿ ಮೂಲದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ನೆಟ್ ಡಬ್ಲ್ಯೂಟಿಯೊಂದಿಗೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದಾಗ ತಡೆದು ತಪಾಸಣೆ ನಡೆಸಿ 50,79,967 ಮೌಲ್ಯದ 824.67 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.