ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಅಮೋಘ ಪ್ರದರ್ಶನದೊಂದಿಗೆ ಚಿನ್ನದ ಪದಕಗಳನ್ನು ಗೆದ್ದ ಭಾರತೀಯ ಬಾಕ್ಸರ್‌ಗಳಾದ ನೀತು ಘಂಘಾಸ್ ಮತ್ತು ಸವೀಟಿ ಬೂರಾ. ಈ ಸಾಧನೆಯಿಂದ ಭಾರತದ ನೂತನ ವಿಶ್ವ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
48 ಕೆಜಿ ವಿಭಾಗದ ಫೈನಲ್‌ನಲ್ಲಿ ನೀತು ಘಂಘಾಸ್ ಅವರು ಮಂಗೋಲಿಯಾದ ಲುಸೈಖಾನ್ ಅಲ್ತಾನ್ಸೆತ್ಸೆಗ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು.
22 ವರ್ಷದ ನೀತು ಘಂಘಾಸ್ ಅವರು ಕಿಕ್ಕಿರಿದು ಜಮಾಯಿಸಿದ್ದ ವೀಕ್ಷಕರ ಸಮ್ಮುಖದಲ್ಲಿ ಅಮೋಘ ಪ್ರದರ್ಶನ ನೀಡಿದರು.
ಮತ್ತೊಂದು ಪಂದ್ಯದಲ್ಲಿ ಸವೀಟಿ ಬೂರಾ (81 ಕೆಜಿ) ಅವರು ಚೀನದ ವಾಂಗ್ ಲಿನಾ ಅವರನ್ನು 3-2ರಿಂದ ಪರಾಭವಗೊಳಿಸಿದರು.
ಇವರಿಬ್ಬರ ಸಾಧನೆಯೊಂದಿಗೆ ಭಾರತದ ವನಿತಾ ವಿಶ್ವ ಚಾಂಪಿಯನ್‌ಗಳ ಸಂಖ್ಯೆ ಏಳಕ್ಕೇರಿತು. ಮೇರಿ ಕೋಮ್ (6 ಸಲ), ಸರಿತಾ ದೇವಿ, ಜೆನ್ನಿ ಆರ್.ಎಲ್., ಲೇಖಾ ಕೆ.ಸಿ., ನಿಖತ್ ಜರೀನ್ ಉಳಿದ ಸಾಧಕಿಯರು.