eKYC ಮಾಡಿಸದ ಫಲಾನುಭವಿಗಳ ಪಡಿತರವನ್ನು ತಾತ್ಕಾಲಿಕವಾಗಿ ಸ್ಥಗಿತಕ್ಕೆ ಸೂಚನೆ- ಆಹಾರ ಸಚಿವ ಕೆ.ಎಚ್ ಮುನಿಯಪ್ಪ

ರಾಜ್ಯದಲ್ಲಿ eKYC ಪ್ರಕ್ರಿಯೆ ಪೂರ್ಣಗೊಳಿಸದ ಪಡಿತರ ಚೀಟಿದಾರರ ಸಂಖ್ಯೆ ಇನ್ನೂ ಗಮನಾರ್ಹವಾಗಿದೆ. ಈ ವಿಚಾರದಲ್ಲಿ ಗಂಭೀರ ಚಿಂತೆ ವ್ಯಕ್ತಪಡಿಸಿ, ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದೆ ಮಾತನಾಡಿದ ಅವರು, ಒಂದು ತಿಂಗಳ ಗಡಿಯನ್ನು ನಿಗದಿ ಮಾಡಿದ್ದು, ಈ ಅವಧಿಯಲ್ಲಿ eKYC ಮುಗಿಸದ ಫಲಾನುಭವಿಗಳ ಪಡಿತರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದರು.

ಯಾವುದೇ ಅನಗತ್ಯ ಪಡಿತರ ಕಾರ್ಡ್ ವಿತರಣೆಯಾದರೆ, ತಕ್ಷಣವೇ ತನಿಖೆ ನಡೆಸಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾವಾರಿಯಾಗಿ ಜಾಗೃತಿ ಸಮಿತಿಗಳನ್ನು ರಚಿಸಿ, ಸಾರ್ವಜನಿಕರಲ್ಲಿ ತಿಳಿವು ಮೂಡಿಸುವ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಹೇಳಿದರು‌.

ಇದೇ ಸಭೆಯಲ್ಲಿ ಆಹಾರಧಾನ್ಯಗಳ ಸುರಕ್ಷಿತ ಸಂಗ್ರಹಣೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಿದ ಧಾನ್ಯಗಳ ನಿರ್ವಹಣೆ, ಗುಡ್ಡ ಪ್ರದೇಶದ ಮನೆಗಳಿಗೆ ಪಡಿತರ ತಲುಪುವ ವ್ಯವಸ್ಥೆ, ಕಾನೂನು ಮಾಪನ ಇಲಾಖೆಗೆ ಬೇಕಾದ ವಾಹನ-ಸಿಬ್ಬಂದಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಸೂಕ್ತ ಸೂಚನೆಗಳು ನೀಡಲಾಯಿತು ಎಂದು ತಿಳಿಸಿದರು.

ಪಡಿತರ ವ್ಯವಸ್ಥೆಯಲ್ಲಿನ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸಾರ್ವಜನಿಕ ಹಿತವನ್ನು ಕೇಂದ್ರಬಿಂದುಗೊಳಿಸಿಕೊಂಡು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಈ ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಶ್ರೀ ಮನೋಜ್ ಜೈನ್, ಆಯುಕ್ತ ಶ್ರೀಮತಿ ವಿಜಯ ಜ್ಯೋತ್ಸ್ನಾ, ಆಪ್ತ ಕಾರ್ಯದರ್ಶಿ ಡಾ. ಎಚ್. ನಟರಾಜ್, ನಿಗಮ ನಿರ್ದೇಶಕ ಶ್ರೀ ಜಗದೀಶ್ ಹಾಗೂ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!