ಕಡಿತಗೊಂಡ ಸೇವಾ ಸಿಂಧು ಆನ್ ಲೈನ್ ಸೇವೆಗಳು: ಸಂಕಷ್ಟದಲ್ಲಿ CSC ಸೇವಾ ಸಿಂಧು ಆಪರೇಟರ್ಸ್…!

ಸರ್ಕಾರ ಜಾರಿಗೆ ತರುವ ಯೋಜನಾ ಸವಲತ್ತುಗಳನ್ನು ಪಡೆಯಲು ಆನ್ ಲೈನ್ ಮುಖಾಂತರ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ಸಿ ಎಸ್ ಸಿ ಸೇವಾಸಿಂಧು, ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ವಿವಿಧ ಪೋರ್ಟ್ ಲ್ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

ಮೊದಲು ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಸೇವಾ ಸಿಂಧು ಪೋರ್ಟ್ ಲ್ ಮೂಲಕ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿತ್ತು. ಈಗ ದಿಢೀರನೆ ಸೇವಾ ಸಿಂಧು ಪೋರ್ಟ್ ಲನ್ನು ಪ್ರತ್ಯೇಕಿಸಿ ಕೇವಲ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಗೆ ನೀಡಿರುವುದು ಸೇವಾ ಸಿಂಧು ಮುಖೇನ ಅರ್ಜಿ ಸಲ್ಲಿಸುವ ಹಾಗು ಸಿ ಎಸ್ ಸಿ ಸೆಂಟರ್ ನಡೆಸುವ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ಈ ಕುರಿತು ಬಿಎಸ್ ಎನ್ ಎಲ್ ಕಚೇರಿ ಸಮೀಪವಿರುವ ಸೈಬರ್ ಸೆಂಟರ್ ಮಾಲೀಕ‌ ಹಾಗೂ ಸಿಎಸ್ ಸಿ ಸೇವಾ ಸಿಂಧು ಆಪರೇಟರ್ ರವಿಚಂದ್ರ ಮಾತನಾಡಿ, ಕಳೆದ 10 ವರ್ಷಗಳಿಂದ ಕಾಮನ್ ಸರ್ವಿಸಸ್ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದೇವೆ. ಆಧಾರ್ ತಿದ್ದುಪಡಿ, ಪಡಿತರ ತಿದ್ದುಪಡಿ, ವೋಟರ್ ಐಡಿ ತಿದ್ದುಪಡಿ, ಬ್ಯಾಂಕ್ ಅಕೌಂಟ್, ಉದ್ಯಮ್ ನೋಂದಣಿ, ಪವರ್ ಲೂಮ್ ಸಬ್ಸಿಡಿ, ವಿದ್ಯಾರ್ಥಿ ವೇತನ, ಜಿಎಸ್ ಟಿ ನೋಂದಣಿ, ಎಲ್ ಎಲ್ ಮತ್ತು ಡಿಎಲ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪೊಲೀಸ್ ವೆರಿಫಿಕೇಶನ್ ಪ್ರಮಾಣ ಪತ್ರ, ಇ ಶ್ರಮ ಕಾರ್ಡ್, ವಿದ್ಯಾರ್ಥಿಗಳ ಬಸ್ ಪಾಸ್, ವಿದ್ಯಾರ್ಥಿ ವೇತನ ಹಾಗು ಹಾಗು ಹಲವು ಸರ್ಕಾರಿ ಸೌಲಭ್ಯಗಳ ಅರ್ಜಿಗಳನ್ನು ಸೇವಸಿಂಧು ಪೋರ್ಟಲ್ ನ ಮುಖಾಂತರ ಸಲ್ಲಿಸುತ್ತಿದ್ದೆವು ಆದರೆ ಇತ್ತೀಚಿನ ಕೆಲವು ಗ್ಯಾರೆಂಟಿ ಯೋಜನೆಗಳು ಒಂದೊಂದಾಗಿ ಪ್ರತ್ಯೇಕಿಸಿ ಆ ಯೋಜನೆಗಳ ಅರ್ಜಿಗಳನ್ನು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಗೆ ನೀಡಿರುವುದು, ಸಿ ಎಸ್ ಸಿ ಸೆಂಟರ್ ಗಳನ್ನು ನಡೆಸಿ ಇಷ್ಟು ವರ್ಷಗಳಿಂದ ಜನ ಸೇವೆ ನೀಡಿ ಅದನ್ನೇ ಬದುಕಿಗೆ ಆಧಾರವಾಗಿ ನಂಬಿದ ನಮಗೆ ತುಂಬಾ ನಷ್ಟವಾಗುತ್ತಿದೆ ಎಂದರಲ್ಲದೇ ನಾವು ಸರ್ಕಾರದ ಮಾನದಂಡಗಳನ್ನು ಅನುಸರಿಸಿಯೇ ಅನ್ ಲೈನ್ ಸೇವೆಗಳನ್ನ ಸಾರ್ವಜನಿಕರಿಗೆ ನೀಡುತ್ತಿದ್ದೇವೆ ಆದರೂ ಸೇವಾ ಸಿಂಧುವಿನ ಕೆಲವು ಸೇವೆಗಳನ್ನು ಕಡಿತಗೊಳಿಸಿರುವುದರಿಂದ ನಮಗೆ ಅನ್ಯಾಯವಾಗಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡರು.

ನಾವು ಸೈಬರ್ ನಡೆಸಿ ಜೀವನ ಮಾಡಬೇಕು, ಸೇವಾ ಸಿಂಧು ಪೋರ್ಟ್ ಲ್ ಪ್ರತ್ಯೇಕಿಸಿರುವುದರಿಂದ ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ದಯಮಾಡಿ ಕರ್ನಾಟಕ, ಬೆಂಗಳೂರು, ಗ್ರಾಮ ಒನ್ ಗೆ ನೀಡಿರುವ ಆನ್ ಲೈನ್ ಸೇವೆಗಳನ್ನ ಸೇವಾ ಸಿಂಧು ಪೋರ್ಟ್ ಲ್ ಗೂ ನೀಡಿ ಎಂದು ಒತ್ತಾಯಿಸಿದರು.

Ramesh Babu

Journalist

View Comments

  • SIR I AM CSC CENTAR MAN NAU 4 VARSHAGALIND CSC NADESUTIDDENE SEVA SHINDU PORTALLINALLI BAHALA APPLEACATION TEGEDU HAKI NAMMA HOTTEMELE BARE HAKIDANTAGIDE ADDARIND ADHIKARIGALALLI KELIKOLLUVUDENENDARE GRAMA ONE, KARNATAKA ONE GE NIDID SAVALATTIU GALANNU CSC GU KODI ENDU ADIKARIGALLI KALAKALIEND KELIKOLLUTTENE

Recent Posts

ದೊಡ್ಡಬಳ್ಳಾಪುರದಲ್ಲಿ ರಾಯಲ್‌ ಓಕ್‌ ಫರ್ನಿಚರ್ ನೂತನ ಮಳಿಗೆ ಉದ್ಘಾಟನೆ

ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್‌ ಓಕ್‌ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…

7 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ – ​ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸ್ಪಷ್ಟನೆ

ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ‌ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ‌ಕೊರತೆ…

10 hours ago

Affordable Emotional Support Animal Letters for Enhanced Well-being

Cheap Emotional Support Animal Letter: Affordable ESA Documentation Affordable Emotional Support Animal Letters for Enhanced…

18 hours ago

ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಶ್ರೀರಾಮೋತ್ಸವ‌:‌ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ: ಶ್ರೀರಾಮ ನಾಮದಲ್ಲಿ ಮಿಂದೆದ್ದ ಸಹಸ್ರಾರು ಜನ

ಶ್ರೀರಾಮನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಮಾರ್ಚ್ 27 ರಿಂದ ಮೂರು ದಿನಗಳ…

22 hours ago

ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ದಾರುಣ ಸಾವು

ಆಟವಾಡುತ್ತಾ ಈಜಲು ಹೋದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು…

1 day ago

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್…!!?: ಪ್ರಸಾದ ತಿಂದ ಬಹುತೇಕ ಜನ ಆಸ್ಪತ್ರೆ ಪಾಲು….!

ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್...!!?ಆಗಿದ್ದು, ಅನ್ನಪ್ರಸಾದ ಸೇವಿಸಿದ ಗ್ರಾಮಸ್ಥರಲ್ಲಿ ಬಹುತೇಕ ಜನ ಆಸ್ಪತ್ರೆ ಪಾಲಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ…

1 day ago