ದೊಡ್ಡಬಳ್ಳಾಪುರ ತಾಲೂಕಿನ ಹೊರವಲಯದ ಬಾಶೆಟ್ಟಿಹಳ್ಳಿ ಬಳಿಯ ಜೆಪಿ ಬಾರ್ ಸಮೀಪ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಪುಂಡರ ಗ್ಯಾಂಗ್ ಒಂದು ಯುವಕನ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುರಿಯುತ್ತಿರುವ ಮಳೆ, ಹೆದ್ದಾರಿಯಲ್ಲಿ ವಾಹನಗಳ ಓಡಾಟ ನಡುವೆ ರಾಜಾರೋಷವಾಗಿ ಯಾವುದೇ ಭಯವಿಲ್ಲದೇ ಯುವಕರ ಗುಂಪುಗಳ ನಡುವೆ ಜಗಳ, ಹೊಡೆದಾಟ, ಮಾತಿನ ಚಕಮಕಿ, ಲಾಂಗು ಮಚ್ಚು ಕೈಯಲ್ಲಿ ಹಿಡಿದು ಓಡಾಡುವುದು, ಯುವಕ ಮೇಲೆ ಅಟ್ಯಾಕ್ ಮಾಡುವುದು, ಮತ್ತೆ ಚೀಲವೊಂರದಲ್ಲಿ ಲಾಂಗನ್ನು ಇಟ್ಟಿಕೊಳ್ಳುವುದು, ಅಲ್ಲಿಂದ ಎಸ್ಕೇಪ್ ಆಗುವುದು ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಹಲ್ಲೆಗೊಳದ ಯುವಕನ ಶವ ಪತ್ತೆಯಾಗಿದೆ, ಸ್ನೇಹಿತರಿಂದಲ್ಲೇ ಕೊಲೆಯಾದ ಯುವಕ ತಾಲೂಕಿನ ಹೂಸ್ಕೂರ್ ಗ್ರಾಮದ 27 ವರ್ಷದ ಹೇಮಂತ್ ಗೌಡ ಎಂದು ಗುರುತಿಸಲಾಗಿದೆ.
ಸದ್ಯ ಕೊಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.