‘ದೃಶ್ಯ’ ಸಿನಿಮಾದ ಮಾದರಿಯಲ್ಲಿ ದೊಡ್ಡಬಳ್ಳಾಪುರದ ಹೊರವಲಯದ ನಾರಾಯಣ್ ಇನ್ಫೋಸಿಟಿಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದಲ್ಲಿ ಸೋಕೋ ತಂಡದೊಂದಿಗೆ ಶವವನ್ನು ಹೂತಿಟ್ಟ ಸ್ಥಳವನ್ನು ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ವೇಳೆ ಶವದ ತಲೆ ಕೂದಲು, ಚಪ್ಪಲಿ ಸಿಕ್ಕಿದ್ದು, ಹೆಚ್ಚಿನ ಮಾಹಿತಿಗಾಗಿ ಮಧುರೆ ಕೆರೆಯಲ್ಲಿ ಮೂಳೆಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿದಾಗ ಮೂಳೆಗಳು ಪತ್ತೆಯಾಗಿವೆ.
ಅ.17ರಂದು ಹಣ ಕೊಡುತ್ತೇನೆಂದು ಗೌರಿಬಿದನೂರು ಕಡೆ ಕರೆದುಕೊಂಡು ಹೋಗಿ ಕಾರಲ್ಲಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲ್ಲಲಾಗುತ್ತದೆ. ಕೊಲೆ ಮಾಡಿದ ನಂತರ ಅದೇ ರಾತ್ರಿ ಸುಮಾರು 10ಗಂಟೆ ಸಮಯದಲ್ಲಿ ಈಗಾಗಲೇ ಗುಂಡಿ ತೋಡಿದ್ದ ಸ್ಥಳಕ್ಕೆ ಶವವನ್ನು ತೆಗೆದುಕೊಂಡು ಬಂದು ಗುಂಡಿಯಲ್ಲಿ ಮುಚ್ಚಲಾಗುತ್ತದೆ. ನಂತರ ಅನುಮಾನ ಬರುತ್ತದೆ ಎಂದು ಶವವನ್ನು ಗುಂಡಿಯಿಂದ ತೆಗೆದು ಗ್ಯಾರೇಜ್ ನಿಂದ ಮೆಟಲ್ ಡ್ರಂ ತಂದು ಅದರಲ್ಲಿ ಶವವನ್ನು ಹಾಕಿ ಸುಡಲಾಗುತ್ತದೆ. ಸುಟ್ಟ ನಂತರ ಬೂದಿಯನ್ನು ಹಾಗೂ ಮೂಳೆಗಳನ್ನು ಮಧುರೆ ಕೆರೆಯಲ್ಲಿ ಹಾಕುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ..
ಇದೀಗ ಸುಟ್ಟ ಶವವನ್ನು ಮಧುರೆ ಕೆರೆಗೆ ಹಾಕಲಾಗಿದ್ದ ಅಸ್ಥಿಪಂಜರವನ್ನು ಪತ್ತೆ ಮಾಡಿ. ಮುಂದಿನ ತನಿಖೆ ಕೈಗೊಂಡಿದ್ದಾರೆ.