BPL ಕಾರ್ಡ್ ಹೊಂದಿ ಉಚಿತ ಅನ್ನಭಾಗ್ಯ ಸೌಲಭ್ಯ ಪಡೆಯುತ್ತಿರುವವರಿಗೆ ಸರ್ಕಾರ ಶಾಕ್ ನೀಡಿದೆ. ಆಹಾರ ಇಲಾಖೆಯಿಂದ ಅರ್ಹತೆ ಇಲ್ಲದಿದ್ದರೂ BPL ಕಾರ್ಡ್ ಹೊಂದಿದವರ ಆರ್ಥಿಕ ಸ್ಥಿತಿಗಳ ಬಗ್ಗೆ ಸರ್ವೇ ಕಾರ್ಯ ನಡೆಸಲಾಗುತ್ತಿದೆ.
ಸದ್ಯ ರಾಜ್ಯದಲ್ಲಿ 1 ಕೋಟಿ 28 ಲಕ್ಷ ಮಂದಿ BPL ಕಾರ್ಡ್ ಹೊಂದಿದ್ದು, ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ. ಸರ್ವೇ ಮಾಡಿದರೆ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಮಂದಿಯ BPL ಕಾರ್ಡ್ ರದ್ದು ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ಎಂಡಿ ಗ್ಯಾನೇಂದ್ರ ಮಾಹಿತಿ ನೀಡಿದ್ದಾರೆ.
ವೈಟ್ ಬೋರ್ಡ್ ಕಾರು, ನಿಗದಿತ ವಾರ್ಷಿಕ ಆದಾಯ, ಸರ್ಕಾರಿ ನೌಕರರು, ನಿಗದಿತ ಜಮೀನು ಹೀಗೆ ಒಟ್ಟು 6 ಮಾನದಂಡಗಳ ಆಧಾರದ ಮೇಲೆ ಸರ್ವೇ ನಡೆಸಲಾಗುತ್ತಿದೆ.
ಈಗಾಗಲೇ ಸರ್ವೇ ನಡೆಸಿ 35ಸಾವಿರಕ್ಕೂ ಅಧಿಕ BPL ಕಾರ್ಡ್ ರದ್ದು, ಸಾವನ್ನಪ್ಪಿರುವ ಸುಮಾರು 4.55 ಲಕ್ಷ ಜನರ ಹೆಸರನ್ನ ಅಳಿಸಿದ ಆಹಾರ ಇಲಾಖೆ.
ರದ್ದು ಮಾಡುವುದುರ ಜೊತೆಗೆ ಮಾನದಂಡ ಉಲ್ಲಂಘಿಸಿದವರಿಂದ 8 ಕೋಟಿಗೂ ಅಧಿಕ ದಂಡ ವಸೂಲಿ ಸಹ ಮಾಡಲಾಗಿದೆ. ಸಾವನ್ನಪ್ಪಿದರ ಹೆಸರನ್ನ ಅಳಿಸಿರುವುದರಿಂದ ಸರ್ಕಾರಕ್ಕೆ ತಿಂಗಳಿಗೆ 6ರಿಂದ 7 ಕೋಟಿ ಉಳಿತಾಯವಾಗಿದೆ.
ಅನಧಿಕೃತವಾಗಿ BPL ಕಾರ್ಡ್ ಹೊಂದಿರುವವರ ಪೈಕಿ ಸರ್ಕಾರಿ ನೌಕರರು & ವೈಟ್ ಬೋರ್ಡ್ ಕಾರು ಇರುವವರೇ ಹೆಚ್ಚಾಗಿದ್ದಾರೆ. RTO ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 44,62,107 ವೈಟ್ ಬೋರ್ಡ್ ಕಾರುಗಳಿವೆ ಎಂದು ಆಹಾರ ಇಲಾಖೆ ಎಂಡಿ ಗ್ಯಾನೇಂದ್ರ ಮಾಹಿತಿ ನೀಡಿದ್ದಾರೆ.
BPL ಕಾರ್ಡ್ ಮಾನದಂಡ ಏನು.!?
• ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು
• 3 ಹೆಕ್ಟರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು
• ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು
• ಯಾವುದೇ ಸರ್ಕಾರಿ ನೌಕರರಾಗಿರಬಾರದು
• ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 sqt ಮೀರಬಾರದು
• ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT ರಿಟರ್ನ್ಸ್ ಪಾವತಿದಾರರು