
ಕಾರಿನಲ್ಲಿ ಪೂಜೆಗೆಂದು ದೊಡ್ಡಬಳ್ಳಾಪುರ ತಾಲೂಕಿನ ಕರೇನಹಳ್ಳಿ ನಿವಾಸಿಗಳಾದ ಕಾರಿನಲ್ಲಿ ಏಂಟು ಮಂದಿ ಸ್ನೇಹಿತರು ಹೊರಡುವಾಗ ಬೆಂಗಳೂರು-ಹಿಂದೂಪುರ ಹೆದ್ದಾರಿಯ ನಾಯಕರಂಡನಹಳ್ಳಿ-ಮಾಕಳಿ ಮಾರ್ಗ ಮಧ್ಯೆಯಲ್ಲಿ ಭೀಕರ ಅಪಘಾತ ನಡೆದಿದೆ.
ಮಂಚೇನಹಳ್ಳಿ ಬಳಿಯ ಭೀಮೇಶ್ವರ ಬೆಟ್ಟದಲ್ಲಿ ಪೂಜೆಗೆಂದು ಸುಮಾರು ಏಂಟು ಮಂದಿ ಸ್ನೇಹಿತರು ಕಾರಿನಲ್ಲಿ ಹೊರಟಿದ್ದರು. ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನುಳಿದ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ.

ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜು ಸಮೀಪದ ಕರೇನಹಳ್ಳಿ ನಿವಾಸಿಗಳಾದ ಡಿ.ಎಂ ಈಶ್ವರಪ್ಪ(75), ಡಿ.ಎನ್ ಕಾಳಪ್ಪ(65), ನರಸಿಂಹಮೂರ್ತಿ(70), ಪುರುಷತ್ತೋಮ(75), ಹಾಗೂ ಗೋಪಿನಾಥ್ ಮೃತ ದುರ್ದೈವಿಗಳು.
ಲಾರಿಯನ್ನು ಸೈಡ್ ಹೊಡೆಯಲು ಹೋದಾಗ ಎದರುಗಡೆಯಿಂದ ಕೆಎಸ್ ಆರ್ ಟಿಸಿ ಬಸ್ ಅಡ್ಡಬಂದಿದೆ. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ ಎನ್ನಲಾಗಿದೆ .
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…