
ನೆಲಮಂಗಲದ ಜಿಂದಾಲ್ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಕಾ ಕಾರು, ಬೆಂಗಳೂರಿನಿಂದ ಹೊರಟಿದ್ದ KSRTC ಬಸ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ, ಕಾರಿನಲ್ಲಿದ್ದ ಎಲ್ಲಾ ಐವರು ಪ್ರಯಾಣಿಕರು ಸಾವನ್ನಪ್ಪಿದ್ದರು. ವೇಗವಾಗಿ ಬರುತ್ತಿದ್ದ ಕಾರು ಹೆದ್ದಾರಿಯ ಡಿವೈಡರ್ ಹಾರಿ ಬಸ್ಗೆ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮೃತ ದುರ್ದೈವಿಗಳನ್ನು ದೊಡ್ಡಬಳ್ಳಾಪುರದ ಬಸವ ಭವನ ಸಮೀಪದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ ಲಲಿತ್, ತಿಪ್ಪಾಪುರದ ಹರ್ಷಿತ್ ಸಿ, ದೇವರಾಜ ನಗರದ ದುರ್ಗಾಪ್ರಸಾದ್, ಕರೇನಹಳ್ಳಿ ಧನುಷ್, ಕಲ್ ಪೇಟೆ ನಿವಾಸಿ ಕೇಶವ್ ಎಂ ಎಂದು ಗುರುತಿಸಲಾಗಿದೆ…

ಮೃತರಲ್ಲಿ ಲಲಿತ್, ಕೇಶವ, ದುರ್ಗಾಪ್ರಸಾದ್ ಮೂವರ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ನಗರದ ಮುಕ್ತಿಧಾಮದಲ್ಲಿ ನಾಲ್ವರ ಅಂತ್ಯಕ್ರಿಯೆ ನಡೆಯಿತು. ಹರ್ಷಿತ್ ಅಂತ್ಯಕ್ರಿಯೆ ತಿಂಡ್ಲು ಗ್ರಾಮದಲ್ಲಿ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.