ವರದಕ್ಷಿಣೆ ಕಿರುಕುಳದಿಂದ ಮನನೊಂದು ಗೃಹಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಐಶ್ವರ್ಯ ಪತಿ ರಾಜೇಶ್ ಸೇರಿ ಐವರು ಆರೋಪಿಗಳನ್ನು ಗೋವಿಂದರಾಜನಗರ ಪೊಲೀಸರು ಬಂಧನ ಮಾಡಿದ್ದಾರೆ.
26 ವರ್ಷದ ಐಶ್ವರ್ಯ ಆತ್ಮಹತ್ಯೆಗೆ ಶರಣಾಗಿದ್ದ ಗೃಹಿಣಿ, ಅಕ್ಟೋಬರ್ 26 ರಂದು ಗೋವಿಂದರಾಜ ನಗರ ತವರುಮನೆಯಲ್ಲಿ ಫ್ಯಾನಿಗೆ ಕೊರಳೊಡ್ಡಿದ್ದ ಗೃಹಿಣಿ ಐಶ್ವರ್ಯ. ಘಟನೆ ಸಂಬಂಧ ಐಶ್ವರ್ಯ ತಾಯಿಯಿಂದ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲು.
ಪ್ರಕರಣ ಸಂಬಂಧ ಮೃತ ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ರನ್ನ ಬಂಧಿಸಿ ವಿಚಾರಣೆ ಮುಂದುವರಿಸಿರುವ ಪೊಲೀಸರು.
ಐಶ್ವರ್ಯ ಸುಸೈಡ್ ಬಳಿಕ ಗೋವಾ, ಮುಂಬೈನಲ್ಲಿ ಪಾರ್ಟಿಮಾಡುತ್ತಿದ್ದ ಪತಿ ಮನೆಯ ಸದಸ್ಯರು. ಪ್ರಸಿದ್ದ ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ಜತೆ ಟೈಯಾಪ್ ಆಗಿರುವ ಸಿತಾ ಐಸ್ ಕ್ರೀಮ್ ಪ್ರೈ,ಲಿ. ಮಾಲೀಕರಾಗಿದ್ದ ರಾಜೇಶ್ ಕುಟುಂಬ.
ಮದುವೆ ಮಾಡಿಸಿದ್ದು ಸಂಬಂಧಿಕರೇ ಕೊನೆಗೂ ಮದುವೆ ಮುರಿದಿದ್ದು ಸಂಬಂಧಿಕರೇ ಎಂಬ ಕೂಗು ಕೇಳಿಬಂದಿದೆ. ಐಶ್ವರ್ಯ ಯುಎಸ್ ಎ ನಲ್ಲಿ ಎಂಬಿಎ ಮಾಡಿಕೊಂಡಿದ್ದರು. ಕಳೆದ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನ ಕುಟುಂಬಸ್ಥರ ನಿಶ್ಚಯದಂತೆ ಮದುವೆಯಾಗಿದ್ದರು.
ಸಿತಾ ಐಸ್ ಕ್ರೀಮ್ ಪ್ರೈ,ಲಿ ಕಂಪನಿಯಲ್ಲಿ ಆಡಿಟರ್ ಆಗಿದ್ದ ಐಶ್ವರ್ಯ ಸಂಬಂಧಿ ರವೀಂದ್ರ ಎಂಬುವವರು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ರವೀಂದ್ರ ಎಂಬುವವರು ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡ ಆಗಿದ್ದಾರೆ. ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು. ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ಹುಳಿ ಹಿಂಡಿರುವ ದಾಯಾದಿಗಳು ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಮನನೊಂದ ಐಶ್ವರ್ಯ ಕಳೆದ ಅ.26 ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯತೆಗೆ ಶರಣಾಗಿದ್ದಾರೆ.