ಶೌಚಾಲಯದ ಬಳಿ‌ ಮಹಿಳೆಯ 3.7 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 1 ಲಕ್ಷ ನಗದು ಎಸ್ಕೇಪ್

ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಮಹಿಳೆಯ ಡೈಮಂಡ್ ರಿಂಗ್, 1 ಲಕ್ಷ ನಗದನ್ನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -1ರ ನಿರ್ಗಮನ ದ್ವಾರದ ಗೇಟ್ ನಂಬರ್ -1 ಬಳಿಯ ಶೌಚಾಲಯದ ಬಳಿ ನಡೆದಿದೆ.

ಬೆಂಗಳೂರಿನಿಂದ- ಅಹಮದಬಾದ್ ಗೆ ಪ್ರಯಾಣ ಬೆಳಸಿದ ಮಹಿಳೆಯೊಬ್ಬರು ಕೆಐಎಎಲ್ ಬಳಿಯ ಶೌಚಾಲಯಕ್ಕೆ ಹೋಗಿದ್ದರು, ಶೌಚಾಲಯಕ್ಕೆ ಹೋಗುವ ಮುನ್ನ ತಮ್ಮ ಬ್ಯಾಗ್ ನ್ನು ಹೊರಗಿಟ್ಟಿದ್ದರು, ವಾಪಸ್ ಬಂದು ನೋಡಿದಾಗ ಬ್ಯಾಗ್ ನಾಪತ್ತೆಯಾಗಿದೆ, ಬ್ಯಾಗ್ ನಲ್ಲಿದ್ದ ಡೈಮಂಡ್ ರಿಂಗ್, ಒಂದು ಲಕ್ಷ ನಗದು ಕಳವು ಮಾಡಲಾಗಿದೆ.

ಬ್ಯಾಗ್ ನಲ್ಲಿ ಒಂದು ಡೈಮಂಡ್ ರಿಂಗ್ , ಒಂದು ಜೊತೆ ಕಿವಿಯೊಲೆ ಮತ್ತು 1 ಲಕ್ಷ ನಗದು ಹಣ ಇದ್ದು,  3.7 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 1 ಲಕ್ಷ ನಗದು ಕಳವು ಮಾಡಲಾಗಿದೆ ಎಂದು ಶಾಲೂ ಅಗರ್ವಾಲ್ ಸ್ನೇಹಿತರಾದ ಪ್ರಣವ್ ವಿಠಲ್ ಗಂಭೀರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *