ನಗರದ ಡಾ.ಬಿ.ಆರ್.ಅಂಬೇಡ್ಕರ್ (ಟಿ.ಬಿ) ವೃತ್ತದಲ್ಲಿ ಅಳವಡಿಸಿದ್ದ ಟ್ರಾಫಿಕ್ ಸಿಗ್ನಲ್ ಗಳು ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿವೆ. ಈ ಹಿನ್ನೆಲೆ ಈ ವೃತ್ತದಲ್ಲಿ ಬೆಳಗ್ಗೆ-ಸಂಜೆ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುತ್ತಿರುವ ಬಗ್ಗೆ ‘ಪಬ್ಲಿಕ್ ಮಿರ್ಚಿ‘ ವರದಿ ಮಾಡಿತ್ತು. ಈ ಹಿನ್ನೆಲೆ ಇಂದು ವೃತ್ತಕ್ಕೆ ಆಗಮಿಸಿದ ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಅವರು ವಾಹನ ದಟ್ಟಣೆ ನಿಯಂತ್ರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇನ್ಸ್ ಪೆಕ್ಟರ್ ಕಾರ್ಯವನ್ನ ಮೆಚ್ಚಿ ಈ ಕಾರ್ಯ ಸಿಬ್ಬಂದಿಯಿಂದ ಪ್ರತಿದಿನ ಬೆಳಗ್ಗೆ- ಸಂಜೆ ಮುಂದುವರಿಸಬೇಕು, ಅದೇರೀತಿ ಅತೀ ಶೀಘ್ರವಾಗಿ ಟ್ರಾಫಿಕ್ ಸಿಗ್ನಲ್ ಗಳು ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.