ತಲೆಯನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗೇಟ್ ಬಳಿ ನಡೆದಿದೆ .
ಸುಮಾರು 40 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿ ಇಲ್ಲಿನ ನಿರ್ಜನ ಪ್ರದೇಶದಲ್ಲಿ ಹಂತಕರು ಮೃತದೇಹ ಎಸೆದು ಹೋಗಿದ್ದಾರೆ . ಇನ್ನು ತಲೆಯನ್ನು ಮಚ್ಚಿನಿಂದ ಕೊಚ್ಚಿದ್ದು , ಬೆರಳುಗಳನ್ನು ಸಹ ಕತ್ತರಿಸಲಿಸಲಾಗಿದೆ.
ಬೇರೆಡೆ ಕೊಲೆ ಮಾಡಿ ಮೃತದೇಹವನ್ನು ಬೆತ್ತಲೆಗೊಳಿಸಿ ನಗರದ ಹೊರವಲಯದಲ್ಲಿ ಎಸೆದು ಹೋಗಿರುವ ಶಂಕೆ. ಪೊಲೀಸರಿಗೆ ಯಾವುದೇ ಕೊಲೆ ಸಾಕ್ಷಿಗಳು ಸಿಗದಂತೆ ಆರೋಪಿಗಳು ಪ್ಲಾನ್ ಮಾಡಿ ಹತ್ಯೆಗೈದಿದ್ದಾರೆ.
ಇಂದು ಬೆಳಗ್ಗೆ ತೋಟಕ್ಕೆ ತೆರಳಲು ಹೊರಟ ರೈತರು ಮೃತದೇಹ ನೋಡಿ ವಿಜಯಪುರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ .
ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಖ ಮತ್ತು ಕೈಗಳ ಮೇಲೆ ಕತ್ತಿ ಅಥವಾ ಮಚ್ಚಿನಿಂದ ಕೊಚ್ಚಲಾಗಿದೆ.