ನಗರದ ಎಂಎಸ್ ವಿ ಪಬ್ಲಿಕ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯಾದ ಹರ್ಷಿತಾ.ಎಂ., CBSE ದಕ್ಷಿಣ ವಲಯ ವಿಭಾಗದ ಅಂತರ್ ಶಾಲಾ ಟೈಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿ ತೀರ್ವವಾದ ಪೈಪೋಟಿಯನ್ನು ನೀಡುವುದರ ಮೂಲಕ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡು ಶಾಲೆ, ಪೋಷಕರು ಹಾಗೂ ನಗರಕ್ಕೆ ಕೀರ್ತಿ ತಂದಿದ್ದಾರೆ.
ಈ ಸ್ಪರ್ಧೆಯು ಅ.19 ರಿಂದ 21ರವರೆಗೆ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು, ಸುಮಾರು 265 ಶಾಲೆಗಳ 2,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
14 ವರ್ಷದೊಳಗಿನ ಹಾಗೂ 37 KG ವಿಭಾಗದಲ್ಲಿ ಹರ್ಷಿತಾ ಪಾಲ್ಗೊಂಡು, ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.
ಶಾಲಾ ಅಧ್ಯಕ್ಷರಾದ ಎ. ಸುಬ್ರಮಣ್ಯ, ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್, ಪ್ರಾಂಶುಪಾಲರಾದ ರಮ್ಯಾ.ಬಿ.ವಿ. ಹಾಗೂ ಶಿಕ್ಷಕವೃಂದ, ಟೇಕ್ವಾಂಡೋ ತಂಡ ಹಾಗೂ ಟೇಕ್ವಾಂಡೋ ತರಬೇತುದಾರ ಶಪರಮೇಶ್ವರ್ ರವರು ಸಾಧನೆಗೈದ ಕುಮಾರಿ ಹರ್ಷಿತಾ.ಎಂ ಅವರನ್ನು ಅಭಿನಂದಿಸಿದ್ದಾರೆ.