ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಆರೋಪ ಹಿನ್ನೆಲೆ ತಮ್ಮನಿಂದಲೇ ಅಣ್ಣನ ಕೊಲೆ ಆಗಿರುವ ಘಟನೆ ದೊಡ್ಡಬಳ್ಳಾಪುರದ ದೊಡ್ಡಮಂಕಲಾಳದಲ್ಲಿ ನಡೆದಿದೆ.
ಗಂಗರಾಜು (35) ಕೊಲೆಯಾದ ದುರ್ದೈವಿ. ತಲೆಯ ಮೇಲೆ ಗುಂಡು ಕಲ್ಲು ಹಾಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ತಮ್ಮ ರವಿ ಮತ್ತು ಹೆಂಡತಿ ಭಾಗ್ಯಮ್ಮ ಕೊಲೆ ಮಾಡಿರುವ ಶಂಕೆವ್ಯಕ್ತವಾಗಿದೆ.
ಕಳೆದ 5 ವರ್ಷಗಳ ಹಿಂದೆ ಸಹೋದರ ರವಿ ಮೃತ ಗಂಗರಾಜನ ಮಡದಿ ಭಾಗ್ಯಮ್ಮಳೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ಮನೆಬಿಟ್ಟು ಹೋಗಿ ಬೆಂಗಳೂರಿನಲ್ಲಿ ವಾಸವಿದ್ದರು ಎನ್ನಲಾಗಿದೆ. ಹೀಗಾಗಿ ತನ್ನ ಮೂರು ಮಕ್ಕಳನ್ನು ಅನಾಥಾಶ್ರಮಕ್ಕೆ ಗಂಗರಾಜ್ ಬಿಟ್ಟಿದ್ದ. 15 ದಿನಗಳ ಹಿಂದೆ ಹೆಂಡತಿ ಮತ್ತು ತಮ್ಮ ಬಂದಾಗ ಗಂಗರಾಜ್ ಕುಪಿತಗೊಂಡು ಗಲಾಟೆ ಮಾಡಿದ್ದ.
ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಸೋಮವಾರ ರಾತ್ರಿ ರುಬ್ಬುವ ಕಲ್ಲನ್ನು ತಲೆಯ ಮೇಲೆ ಎತ್ತಿಹಾಕಿ ರವಿ ಹಾಗೂ ಭಾಗ್ಯಮ್ಮ ಅಣ್ಣನಾದ ಗಂಗರಾಜ ಕೊಲೆ ಮಾಡಿದ್ದಾರೆಂದು ಆರೋಪಿಸಿ ಮೃತನ ತಾಯಿ ಜಯಮ್ಮ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಆರ್.ಹರೀಶ್ ತನಿಖೆ ಆರಂಭಿಸಿದ್ದು, ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.