ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ನಡುವೆ ಅಪಘಾತವಾಗಿರುವ ಘಟನೆ ಬಾಂಗ್ಲಾದೇಶದಲ್ಲಿಂದು ಸಂಜೆ ನಡೆದಿದೆ.
ರೈಲು ಅಪಘಾತದಲ್ಲಿ ಕನಿಷ್ಠ 15 ಪ್ರಯಾಣಿಕರು ಮೃತಪಟ್ಟು, 100 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಿಶೋರ್‌ಗಂಜ್‌ನಿಂದ ಢಾಕಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಸಂಜೆ 4:15 ರ ಸುಮಾರಿಗೆ ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಘಟನೆ ನಡೆದಿದೆ.
ಇದುವರೆಗೆ 13 ಶವಗಳು ಪತ್ತೆಯಾಗಿವೆ ಎಂದು ಭೈರಬ್ ರೈಲ್ವೆ ನಿಲ್ದಾಣದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಸ್ಥಳೀಯ ವಾಹನಿಯೊಂದು ವರದಿ ಮಾಡಿದೆ.