310 ಅರಣ್ಯ ವೀಕ್ಷಕರ ನೇಮಕಾತಿ ಅಧಿಸೂಚನೆ ರದ್ದತಿಗೆ ಆಗ್ರಹಿಸಿ ಅರಣ್ಯ ಭವನದ ಮುಂದೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಸದಸ್ಯರು ತಟ್ಟೆ ಹಿಡಿದು ಭಿಕ್ಷೆ ಬೇಡುವ ಮೂಲಕ ವಿಭಿನ್ನವಾಗಿ ಧರಣಿ ಮಾಡಿದರು.
ಎಸ್ ಎಸ್ ಎಲ್ ಸಿ ಅಂಕಗಳ ಮೇಲಿನ ಆಯ್ಕೆಗಳನ್ನ ರದ್ದುಪಡಿಸಿ, ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಸಂದರ್ಭದಲ್ಲಿ ಲಿಖಿತ ಪರೀಕ್ಷೆ ನಿಲ್ಲಿಸಲಾಗಿತ್ತು. ಈಗ ಪರ್ಸೆಂಟೇಜ್ ಆಧಾರದಲ್ಲಿ ಆಯ್ಕೆ ಮಾಡುತ್ತಿದ್ದಾರೆ. ಈಗಿನ ನೋಟಿಫಿಕೇಷನ್ ಕೂಡಲೇ ರದ್ದು ಮಾಡಿ ಎಲ್ಲಾ ಅರ್ಹರಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.