ಬೆಂಗಳೂರಿನಲ್ಲಿ ತಡರಾತ್ರಿ ದಿಢೀರ್ ಆಗಿ ಐಟಿ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ.
ಗಣೇಶ ಬ್ಲಾಕ್ ನಲ್ಲಿರುವ ಬಿಬಿಎಂಪಿ (BBMP) ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಹಾಗೂ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ದಂಪತಿ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮನೆಯ ಬೆಡ್‍ರೂಂನಲ್ಲಿ ಬರೋಬ್ಬರಿ 23 ಬಾಕ್ಸ್ ಗಳಲ್ಲಿದ್ದ 42 ಕೋಟಿ ರೂ. ಜಪ್ತಿ ಮಾಡಿದ್ದಾರೆ.
ಆ ಬಾಕ್ಸ್ ಗಳಲ್ಲಿ ಗರಿ ಗರಿ 500 ರೂಪಾಯಿ ನೋಟಿನ ಕಂತೆಗಳು ಪತ್ತೆಯಾಗಿದೆ. ಒಂದೊಂದು ಬಾಕ್ಸ್ ನಲ್ಲೂ 1ಕೋಟಿ 65 ಲಕ್ಷ ಹಣ ಶೇಖರಿಸಲಾಗಿತ್ತು ಎನ್ನಲಾಗಿದೆ.