ಮನೆ‌ ಬಳಿ ಇದ್ದ 55‌ಸಾವಿರ ಮೌಲ್ಯದ ಗಾಂಜಾ ವಶ

ಮನೆಯ ಬಳಿಯ ಜಾಗದಲ್ಲಿ ಗಾಂಜಾ ಗಿಡವನ್ನು ಬೆಳೆಯಲಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು 55 ಸಾವಿರ ಮೌಲ್ಯದ ಗಾಂಜಾವನ್ನ ಜಪ್ತಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ

ದೊಡ್ಡಬಳ್ಳಾಪುರ ತಾಲೂಕಿನ ಸೂಲಕುಂಟೆ ಗ್ರಾಮದ  ಆದಿನಾರಾಯಣ ಎಂಬುವರು ತನ್ನ ಮನೆ ಬಳಿಯ ಜಾಗದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರು ಹಾಗೂ ಉಪಆಯುಕ್ತರು ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಅಧೀಕ್ಷಕರು  ನೆಲಮಂಗಲ ಉಪವಿಭಾಗ ಇವರ ನೇತೃತ್ವದಲ್ಲಿ  ದೊಡ್ಡಬಳ್ಳಾಪುರ ವಲಯ ಹಾಗೂ ಉಪವಿಭಾಗದ  ಸಿಬ್ಬಂದಿ ದಾಳಿ ಮಾಡಿದ್ದಾರೆ.

ದಾಳಿ ವೇಳೆ 3 ಫಲಭರಿತ ಗಾಂಜಾ ಗಿಡಗಳು (1.200 ಕೆಜಿ) ಹಾಗೂ ಮಾರಾಟಕ್ಕಾಗಿ ಸಂಗ್ರಹಿಸಿದ್ದ 1.300 ಕೆಜಿ ಒಣ ಗಾಂಜಾ ಜಪ್ತಿ ಮಾಡಿದ್ದಾರೆ,  ಆರೋಪಿ ಆದಿನಾರಾಯಣನ್ನ NDPS ಕಾಯ್ದೆ 1985ರಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಬಕಾರಿ ಇಲಾಖೆ ದಾಳಿಯಲ್ಲಿ ಪರಮೇಶ್ವರಪ್ಪ ಅಬಕಾರಿ ಉಪ ಅಧೀಕ್ಷಕರು ನೆಲಮಂಗಲ ಉಪ ವಿಭಾಗ, ಎಸ್.ಎಂ ಪಾಟೀಲ್ ಅಬಕಾರಿ ನಿರೀಕ್ಷಕರು ದೊಡ್ಡಬಳ್ಳಾಪುರ ವಲಯ, ಶುಭಾಶ್ ಚಂದ್ರ ಅಬಕಾರಿ ನಿರೀಕ್ಷಕರು ನೆಲಮಂಗಲ ಉಪವಿಭಾಗ, ಸಿಬ್ಬಂದಿ ಹನುಮಂತರಾಜು ರಾಜಶೇಖರ, ಬಸಪ್ಪ, ಕೃಷ್ಣ , ಮಂಜುನಾಥ್, ಅಶಾರಾಣಿ, ನಾಗೇಶ್ ಭಾಗವಹಿಸಿದ್ದರು

Leave a Reply

Your email address will not be published. Required fields are marked *