ಇಸ್ರೇಲ್‌ನ ಮೇಲೆ ಶನಿವಾರ ಬೆಳಗ್ಗೆ ಹಮಾಸ್ ಉಗ್ರರು ನಡೆಸಿದ ಭಯಾನಕ ರಾಕೆಟ್ ದಾಳಿ ನಡೆಸಿದೆ.
ರಾಕೆಟ್ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಗಾಜಾದ ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಹೇಳಿದೆ.
ಇಸ್ರೇಲ್ ರಕ್ಷಣಾ ಪಡೆ (IDF) ಹಮಾಸ್‌ನ ಹಠಾತ್ ದಾಳಿಗೆ ಪ್ರತಿಕ್ರಿಯೆಯಾಗಿ ‘ಐರನ್ ಸ್ವೋರ್ಡ್ಸ್’ ನ್ನು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ. ವಾಯು, ಭೂಮಿ ಮತ್ತು ಸಮುದ್ರದಲ್ಲಿ ರಾಕೆಟ್‌ಗಳ ಸುರಿಮಳೆಗೆ ಜನರು ತತ್ತರಿಸಿಹೋಗುತ್ತಿದ್ದಾರೆ.
ಹಮಾಸ್ ಮುಂಜಾನೆ ಇಸ್ರೇಲ್ ಕಡೆಗೆ 5,000 ರಾಕೆಟ್‌ಗಳನ್ನು ಉಡಾಯಿಸಿದೆ ಎಂದು ಹೇಳಿಕೊಂಡಿದೆ, ಅದನ್ನು “ಆಪರೇಷನ್ ಅಲ್-ಅಕ್ಸಾ ಫ್ಲಡ್” ಎಂದು ಕರೆದಿದೆ.
ಕೆಲವು ಭಯೋತ್ಪಾದಕರು ಪ್ಯಾರಾಗ್ಲೈಡರ್ ಬಳಸಿ ಗಡಿ ಪ್ರವೇಶಿಸಿದರೆ, ಕೆಲವು ಭಯೋತ್ಪಾದಕರು ರಸ್ತೆಯ ಮೂಲಕ ಇಸ್ರೇಲ್‌ಗೆ ಪ್ರವೇಶಿಸಿದ್ದಾರೆ ಮತ್ತು ಅವರು ಕಂಡವರನ್ನೆಲ್ಲ ಹೊಡೆದುರುಳಿಸಿದ್ದಾರೆ. ಈ ಹಠಾತ್ ದೊಡ್ಡ ಪ್ರಮಾಣದ ದಾಳಿಯ ನಂತರ, ಇಸ್ರೇಲ್ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡಲೇ ತುರ್ತು ಸಭೆ ಕರೆದಿದ್ದಾರೆ.