ಕಸ್ಟಡಿಯಲ್ಲಿದ್ದಾಗ ವೈಯಾಲಿಕಾವಲ್ ಪೊಲೀಸರು ಬೆಲ್ಟ್, ಬ್ಯಾಟ್ ನಿಂದ ಹೊಡೆದು ಟಾರ್ಚರ್ ಮಾಡಿದ್ದಾರೆಂದು ಆರೋಪಿಸಿ ಎರಡು ಪುಟ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರೋ ವ್ಯಕ್ತಿ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾಗರಾಜ್(47) ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿ.
ಡೆತ್ ನೋಟ್ ನಲ್ಲಿ ವೈಯಾಲಿ ಕಾವಲ್ ಪೊಲೀಸ್ ಇನ್ಸ್ ಪೆಕ್ಟರ್, ಸನಾವುಲ್ಲಾ, ನಟರಾಜ್, ಎಂ.ಸಿ ಯೆರ್ರೇಗೌಡ ಹೆಸರು ಉಲ್ಲೇಖ ಮಾಡಲಾಗಿದೆ. ಅಂದಹಾಗೆ ನಾಗರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಸನಾವುಲ್ಲ ಒಡೆತನದ ಇಪಿಪಿ(ENVIRONMENTAL POLLUTION PROJECT) ಕಂಪನಿ ಹಣ ಪಡೆದು ವಂಚಿಸಿದೆ ಎಂದು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ನಟರಾಜ್ ದೂರು ನೀಡಿದ್ದರು.
ಸನಾವುಲ್ಲಾ ಬದಲಾಗಿ ನಾಗರಾಜ್ ನನ್ನ ಕರೆದೊಯ್ದು ಪೊಲೀಸರು ಟಾರ್ಚರ್ ನೀಡಿದ್ದಾರೆ? ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.