ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ಹೋರಾಟವು ಕೇವಲ ಆರ್ಥಿಕ ಸೌಲಭ್ಯವನ್ನ ಪಡೆಯುವುದು ಮಾತ್ರವಲ್ಲ, ಸರ್ಕಾರಿ ನೌಕರರ ಗೌರವವನ್ನು ಮರಳಿ ಪಡೆಯುವ ಹೋರಾಟವಾಗಿದೆ.
ಏಕೆಂದರೆ ಸರ್ಕಾರಿ ನೌಕರರು 30-35 ವರ್ಷಗಳ ಸೇವೆಯಲ್ಲಿ ತಮ್ಮ ಜ್ಞಾನ ಶಕ್ತಿಯನ್ನು ಸಮಾಜ ನಾಡು, ದೇಶಕಟ್ಟುವ ಕಾರ್ಯಕ್ಕೆ ವಿನಿಯೋಗಿಸುತ್ತಾರೆ. ಈ ಸೇವೆಯನ್ನು ಗೌರವಿಸುವುದು ಸರ್ಕಾರದ ಸಂವಿಧಾನದ ಕರ್ತವ್ಯವಾಗಿದೆ, ಇದನ್ನ ಅರಿತು ರಾಜಸ್ತಾನ ಛತ್ತೀಸ್ ಘಡ್, ಜಾರ್ಖಂಡ್, ಪಂಜಾಬ್ ರಾಜ್ಯಗಳು ಈಗಾಗಲೇ NPS ಯೋಜನೆಗಳನ್ನ ರದ್ದುಗೊಳಿಸಿ OPS ಜಾರಿಗೊಳಿಸಲಾಗಿದೆ.
ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರವು ಸಹ ನಮ್ಮ ಸಂವಿಧಾನ ಬದ್ಧ ಬೇಡಿಕೆಯನ್ನು ಈಡೇರಿಸಬೇಕೆಂದು ಎಂದು ಒತ್ತಾಯಿಸಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ಡಿ.19ರಿಂದ ನಿಶ್ಚಿತ ಪಿಂಚಣಿಗಾಗಿ ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ