ಚೆನ್ನೈನ ಟ್ರೇಡ್ ಸೆಂಟರ್ ನಲ್ಲಿ ನಡೆದ 42ನೇ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆದ ನಗರದ ಎಲೆಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿ ವಸಂತ್.ಎಸ್ ಚಾಂಪಿಯನ್ ಆಗಿ ತಾಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ಅವರು ಶುಭಾಶಯ ಕೋರಿ, ಅಭಿನಂದನೆ ಸಲ್ಲಿಸಿದರು.
ನಗರಸಭೆಯಲ್ಲಿ ಪೌರಕಾರ್ಮಿರಾಗಿ ಕೆಲಸ ಮಾಡುತ್ತಿರುವ ಸುಬ್ಬು ಮತ್ತು ಮಂಜಮ್ಮ ಅವರ ಪುತ್ರ ವಸಂತ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಸೆಪ್ಟೆಂಬರ್ 10 ರಂದು ಚೆನ್ನೈ ನಗರದಲ್ಲಿ ಆಯೋಜಿಸಲಾಗಿದ್ದ 42ನೇ ರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಸಂತ್.ಎಸ್ ಅಬಾಕಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ.
ವಿವಿಧ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ B4 ಚಾಂಪಿಯನ್ ಸ್ಥಾನ ಪಡೆದ ವಸಂತ್.
ಈ ವೇಳೆ ಬಿಇಒ ರಂಗಪ್ಪ ಮಾತನಾಡಿ, ನಮ್ಮ ನಗರದ ಎಲೆಪೇಟೆ ಸರ್ಕಾರಿ ಶಾಲೆಯ ಬಾಲಕ ಚೆನೈ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಉನ್ನತವಾದ ದರ್ಜೆ ಪಡೆದು ಬಂದಿದ್ದಾನೆ, ಅಪರೂಪವಾದ ಇಂತಹ ಮಕ್ಕಳು ನಮ್ಮ ಇಲಾಖೆಗೆ ಹೆಮ್ಮೆಯಾಗಿದ್ದು ವಿದ್ಯಾರ್ಥಿ ಮತ್ತು ಅವರ ತಂದೆ ತಾಯಿ ಹಾಗೂ ಶಾಲೆಯ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಮುಖ್ಯಶಿಕ್ಷಕ ನರಸೇಗೌಡ ಮಾತನಾಡಿ, ನಮ್ಮ ಸರ್ಕಾರಿ ಶಾಲೆಯ ಮಗು ರಾಷ್ಟ್ರೀಯ ಮಟ್ಟದ ಅಬಾಕಸ್‌ನಲ್ಲಿ ಚಾಂಪಿಯನ್ ಆಗಿ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾನೆ, ವಸಂತ್ ಇನ್ನೂ ಉನ್ನತ ಮಟ್ಟದ ಶಿಕ್ಷಣ ಪಡೆದ ಸಮಾಜದಲ್ಲಿ ಉನ್ನತವಾದ ವ್ಯಕ್ತಿಯಾಗಲಿ ಎಂಬುದು ನಮ್ಮ ಆಶಯ ಎಂದರು.
ವಿದ್ಯಾರ್ಥಿ ವಸಂತ್ ಮಾತನಾಡಿ, ನಮ್ಮ ತಂದೆ ತಾಯಿ ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದು ನನ್ನ ಶಿಕ್ಷಣದ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ, ಉಷಾ ಮೇಡಂ ಬಳಿ ತರಬೇತಿ ಪಡೆಯುತ್ತಿದ್ದೇನೆ, ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಉತ್ತಮವಾಗಿ ಕಲಿಸಿಕೊಡುತ್ತಾರೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಎಂದರು
ಈ ವೇಳೆ ಬಿಆರ್‌ಪಿ ಶ್ರೀಕಾಂತ್, ಸಹ ಶಿಕ್ಷಕರಾದ ಅಶೋಕ್, ನೀಲಾಂಭಿಕೆ, ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.