ರಕ್ತನಿಧಿ ಸ್ಥಾಪಿಸಿ ಜನರ ಜೀವ ಉಳಿಸಿ- ಪ್ರ.ವಿ‌.ಬ.ಸಮಿತಿ ರಾ.ಪ್ರ.ಕಾರ್ಯದರ್ಶಿ ಎಂ ಚೆನ್ನಿಗರಾಯಪ್ಪ

ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತನಿಧಿ ಸ್ಥಾಪಿಸಿ ಜನರ ಜೀವ ಉಳಿಸಬೇಕು. ಅದೇರೀತಿ ಪಾರ್ಕಿಂಗ್ ವ್ಯವಸ್ಥೆ, ನವಜಾತ ಶಿಶು ತೀವ್ರ ನಿಗಾ ಘಟಕ, ಹೆಚ್ಚುವರಿ ಅಂಬುಲೆನ್ಸ್, ನುರಿತ ವೈದ್ಯರ ನೇಮಕ, ಎಂಆರ್ ಐ ಸ್ಕ್ಯಾನಿಂಗ್ ಸೆಂಟರ್, ಆಸ್ಪತ್ರೆ ಸುತ್ತಾ ಕಾಂಪೌಂಡ್ ನಿರ್ಮಾಣ ಮಾಡಬೇಕು ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಚೆನ್ನಿಗರಾಯಪ್ಪ ಆಗ್ರಹಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಈ ಕುರಿತು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ಅಸುನೀಗುತ್ತಿದ್ದಾರೆ. ಇದು ಇನ್ನು ಮುಂದೆ ಈ ರೀತಿ ಆಗಬಾರದು ಎಲ್ಲರ ಜೀವ ಅತ್ಯಮೂಲ್ಯ ರೋಗಿಗಳ ಪ್ರಾಣ ಉಳಿಸಬೇಕು ಎಂದರು.

ಈ ಹಿಂದೆ ಇದ್ದ ಡಾ.ಚೌಡಯ್ಯ ನಿಧನದಿಂದ ತೆರವಾದ ಸ್ಥಾನಕ್ಕೆ ತಜ್ಞ ವೈದ್ಯರನ್ನ ನೇಮಿಸಬೇಕು, ಶಿಥಿಲಗೊಂಡಿರುವ ವೀಲ್ ಚೇರ್ ಗಳನ್ನು ಬದಲಿಸಬೇಕು, ಸ್ಕ್ಯಾನಿಂಗ್ ಮಾಡಲು ಹೆಚ್ಚುವರಿ ವೈದ್ಯರನ್ನ ನೇಮಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರಾಜ್ಯ ಕಾರ್ಯದರ್ಶಿ ಎಂ.ಸುರೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ನಗರ ಅಧ್ಯಕ್ಷ ಶ್ರೀನಿವಾಸ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *