12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು ಪ್ರಕರಣ. ಈ ಕುರಿತಂತೆ ಪ್ರತಿಕ್ರಿಯಿಸಿದ ವೈಟ್ ಫೀಲ್ಡ್ ಡಿಸಿಪಿ ಗಿರೀಶ್,
ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದ್ದು, 14 ವರ್ಷದ ಹುಡುಗಿ ಜೆಸ್ಸಿಕಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಅಂತಾ ಗೊತ್ತಾಗಿಲ್ಲ. ತಂದೆ ಸಾಪ್ಟ್ ವೇರ್ ಇಂಜಿನಿಯರ್. ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇಂದು ಬೆಳಗ್ಗೆ ಬಾಲಕಿ ಶಾಲೆಗೆ ಹೋಗಿ ಪುನಃ ವಾಪಸ್ ಬಂದಿದ್ದಾರೆ. ನಂತರ ಟೀಚರ್ ತಾಯಿಗೆ ಕರೆ ಮಾಡಿ ಮಗಳು ಶಾಲೆಗೆ ಬಂದಿಲ್ಲ ಅಂತಾ ಹೇಳಿದ್ದಾರೆ. ನಂತರ ಪೋಷಕರು ಪರಿಶೀಲನೆ ಮಾಡಿದಾಗ ವಿಚಾರ ಗೊತ್ತಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಹೇಳಿದ್ದಾರೆ.
ಮನೆಯಲ್ಲಿ ಅಕ್ಕ, ಎಲ್ಲಾ ಕೆಲಸಕ್ಕೆ ಹೋಗಿದ್ದಾರೆ ಯಾರು ಇರಲಿಲ್ಲ. ಪ್ರಾಥಮಿಕವಾಗಿ ಬಾಲಕಿ ಶಾಲೆಗೆ ಹೋಗಿ ಕ್ಲಾಸ್ ಅಟೆಂಡ್ ಮಾಡದೆ ವಾಪಸ್ ಬರ್ತಾ ಇದ್ದಳು ಅಂತಾ ಗೊತ್ತಾಗಿದೆ. ಅದರೆ ಘಟನೆ ನಿಖರ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ
ಈ ಬಗ್ಗೆ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಹೇಳಿದ್ದಾರೆ.