ನಟ ಪ್ರಕಾಶ್ ರಾಜ್ ನಮ್ಮ ದೇಶದಲ್ಲಿ ಹುಟ್ಟಬಾರದಿತ್ತು: ನಾಸ್ತಿಕ ದೇಶ ಚೀನಾದಲ್ಲಿ ಹುಟ್ಟಬೇಕಿತ್ತು- ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್

ವಿಜ್ಞಾನ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ದೇಶದಲ್ಲಿ ಆಧ್ಯಾತ್ಮಿಕ ಮತ್ತು ವಿಜ್ಞಾನ ಎರಡೂ ಇದೆ. ಇದಕ್ಕೆ ಸಂಬಂಧಿಸಿದಂತೆ ಬುದ್ಧಿ ಜೀವಿಗಳು ಅಪಮಾನ, ವ್ಯಂಗ್ಯ, ಅಪಪ್ರಚಾರ ಮಾಡುತ್ತಿರುವುದು ಮೂರ್ಖತನದ ಕೆಲಸ ಎಂದು ಚಂದ್ರಯಾನ-3ರ ಬಗ್ಗೆ ನಟ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ವಿರುದ್ಧ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ಶ್ರೀರಾಮಸೇನೆ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಗರಕ್ಕೆ ಬಂದಿದ್ದ ಅವರು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಅವರು, ನಟ ಪ್ರಕಾಶ್ ರಾಜ್ ಅವರು ನಮ್ಮ ದೇಶದಲ್ಲಿ ಹುಟ್ಟಬಾರದಿತ್ತು, ಯಾವುದೇ ಧರ್ಮದ ನೆಲೆಗಟ್ಟು ಇಲ್ಲದ ನಾಸ್ತಿಕ ದೇಶವಾದ ಚೀನಾದಲ್ಲಿ ಹುಟ್ಟಬೇಕಿತ್ತು ಎಂದು ಗುಡುಗಿದರು.

ವಿಜ್ಞಾನಿಗಳ ಪರಿಶ್ರಮಕ್ಕೆ ಪ್ರೋತ್ಸಾಹ, ಅಭಿನಂದನೆ ಸಲ್ಲಿಸಬೇಕಾದದ್ದು ಪ್ರಧಾನಿಯವರ ಕೆಲಸ. ಹಾಗಾಗಿ ಅವರು ವಿದೇಶಿ ಪ್ರವಾಸ ಮುಗಿಸಿ ನೇರವಾಗಿ ಬೆಂಗಳೂರಿನ ಇಸ್ರೋ ಕಚೇರಿಗೆ ಬಂದಿದ್ದಾರೆ. ಇಂತಹ ಸಮಯದಲ್ಲಿ ಬಿಜೆಪಿ, ಕಾಂಗ್ರೆಸ್ಸಿಗರು ಎಲ್ಲಿದ್ದರು ಎಂಬುದು ಮುಖ್ಯ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದ ವಿಚಾರದಲ್ಲಿ ಯಾರೂ ಕೂಡ ರಾಜಕಾರಣ ಮಾಡಬಾರದು. ಆ ರೀತಿ ಮಾಡಿದರೆ ಇಸ್ರೋ ವಿಜ್ಞಾನಿಗಳಿಗೆ ಅವಮಾನ ಮಾಡಿದಂತೆ ಎಂದರು.

ಜೆಡಿಎಸ್ ಎಂಎಲ್ ಸಿ ವಿಧಾನಸೌಧದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಪತ್ರದ ಬರೆದಿರುವ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಈ ಹಿಂದೆಯೇ ಪ್ರಾರ್ಥನೆಗೆ ವಿರೋಧ ಅಲ್ಲ, ಶಬ್ದಕ್ಕೆ ವಿರೋಧ ಎಂದು ಹೇಳಿದೆ. ಹೀಗಿದ್ದರೂ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಬೆಳ್ಳಂ ಬೆಳಿಗ್ಗೆ ಜನರ ನಿದ್ದೆಗೆಡಿಸಲಾಗುತ್ತಿದೆ. ಇದು ಮುಂದುವರಿದರೆ ಶ್ರೀರಾಮ ಸೇನೆ ಮತ್ತೆ ಹೋರಾಟಕ್ಕೆ‌ ಇಳಿಯಲಿದೆ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *