ಪಿಂಡಕೂರು ತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆನಂದ್, ಉಪಾಧ್ಯಕ್ಷರಾಗಿ ನಿಖಿತಾ ಸಾರಿಕಾ ಗೌಡ ಆಯ್ಕೆ: ಗಣ್ಯರ ಅಭಿನಂದನೆ

ಪಿಂಡಕೂರು ತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆನಂದ್, ಉಪಾಧ್ಯಕ್ಷ ಸ್ಥಾನಕ್ಕೆ ನಿಖಿತಾ ಸಾರಿಕಾ ಗೌಡ ಅವಿರೋಧವಾಗಿ ಆಯ್ಕೆ ಆಯ್ಕೆಯಾದರು.

ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಮಾನ್ಯ, ಮಹಿಳಾ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಮೀಸಲಿರಿಸಿದ ನಿರ್ದೇಶಕರ ಸ್ಥಾನಗಳಿಗೆ ರಿಟರ್ನಿಂಗ್ ಅಧಿಕಾರಿ ಕೆ.ವಿ.ಮಾಧವರೆಡ್ಡಿ‌ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ‌ ಸ್ಥಾನಗಳಿಗೆ ಕ್ರಮವಾಗಿ ಆನಂದ್ ಹಾಗೂ ನಿಖಿತಾ ಸಾರಿಕಾಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮುನಿರಾಜು, ಗಂಗಾಧರ.ಸಿ, ರಾಮಾಂಜಿನಪ್ಪ, ಪ್ರಕಾಶ್.ಜಿ, ಆನಂದಪ್ಪ, ಸುಬ್ರಮಣಿ, ದೇವರಾಜ್.ಎಂ, ಗೀತಾ, ಚಿಕ್ಕಗಂಗಾಧರಪ್ಪ, ಗಂಗಾಧರಪ್ಪ ಅವರು ನಿರ್ದೇಶಕರಾಗಿ ಆಯ್ಕೆಯಾದರು.

ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಸಿಹಿ ಹಂಚಿ, ಪುಷ್ಪ ಮಾಲೆ ಹಾಕುವ ಮೂಲಕ ಅಭಿನಂದಸಿದ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಹಾಗೂ ಇತರರು.

Leave a Reply

Your email address will not be published. Required fields are marked *