ಎಲ್ಲರ ಚಿತ್ತ ಚೆಸ್ ವಿಶ್ವಕಪ್ ನತ್ತ. ಅತೀವ ಕುತೂಹಲ ಮೂಡಿಸಿದ್ದ ಚೆಸ್ ವಿಶ್ವಕಪ್-2023 ಪಂದ್ಯಾವಳಿಯು ಗುರುವಾರ ನಡೆದ ಫೈನಲ್ ಟೈ ಬ್ರೇಕರ್ ಸ್ಪರ್ಧೆಯಲ್ಲಿ ಭಾರತದ ಆರ್. ಪ್ರಜ್ಞಾನಂದ ಎರಡೂ ಸುತ್ತಿನಲ್ಲೂ ಸೋಲು ಅನುಭವಿಸಿ ನಿರಾಸೆ ಅನುಭವಿಸಿದ್ದು, ಮ್ಯಾಗ್ನಸ್ ಕಾರ್ಲ್ಸನ್ ವಿಶ್ವ ಕಪ್ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ.
ಮಂಗಳವಾರ ನಡೆದ ಮೊದಲ ಸುತ್ತು, ಬುಧವಾರದ 2ನೇ ಸುತ್ತಿನ ಫೈನಲ್ ಪಂದ್ಯ ಕೂಡ ಡ್ರಾ ದೊಂದಿಗೆ ಅಂತ್ಯಗೊಂಡಿತ್ತು. ಇದರೊಂದಿಗೆ ಎರಡೂ ಕ್ಲಾಸಿಕಲ್ ಗೇಮ್‌ಗಳಲ್ಲಿ ಫಲಿತಾಂಶ ದಾಖಲಾಗಿರಲಿಲ್ಲ.
ಇಂದು ನಡೆದ ಟೈ ಬ್ರೇಕರ್‌ನಲ್ಲಿ ಇಬ್ಬರೂ ತಲಾ 10 ನಿಮಿಷಗಳ 2 ರ‍್ಯಾಪಿಡ್ ಗೇಮ್‌ಗಳನ್ನು ಆಡಲಾಯಿತು. ಎರಡರಲ್ಲೂ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಪ್ರಜ್ಞಾನಂದ ನಾರ್ವೇ ಚೆಸ್ ಮಾಸ್ಟರ್ ಎದುರು ಸೋಲಿಗೆ ಶರಣಾಗಬೇಕಾಯಿತು. ಫ್ಯಾಬಿಯಾನೋ ಕರುವಾನಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಚಾಂಪಿಯನ್ ಪಟ್ಟ ಅಲಂಕರಿಸಿದ ಕಾರ್ಲ್‌ಸನ್ ಗೆ $110,000 (₹90, 93,551) ಲಕ್ಷ ರೂಪಾಯಿ ಪಡೆಯಲಿದ್ದಾರೆ. ರನ್ನರ್ ಅಪ್ ಸ್ಥಾನ ಪಡೆದ ಪ್ರಜ್ಞಾನಂದ ಅವರಿಗೆ $80,000 (₹66,13,444) ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆಯಲಿದ್ದಾರೆ.