ಇಂದು ನಾಡಿನಾದ್ಯಂತ ನಾಗರ ಪಂಚಮಿ ಹಿನ್ನೆಲೆ ತಾಲೂಕಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗದೋಷ ನಿವಾರಣೆಗಾಗಿ ನಾಗರಕಲ್ಲುಗಳಿಗೆ ಹಾಲು-ನೀರು ಎರೆದು ಪೂಜೆ ಸಲ್ಲಿಸಿದ ಭಕ್ತಾದಿಗಳು.
ನಾಗರ ಕಲ್ಲುಗಳನ್ನು ಸ್ವಚ್ಛವಾದ ಶುದ್ಧ ನೀರಿನಿಂದ ತೊಳೆದು ಅರಿಶಿನ ಕುಂಕುಮ ಹೂವಿಟ್ಟು ನಂತರ ನಾಗರ ಕಲ್ಲಿಗೆ ಹಾಲೆರೆದ ಭಕ್ತಾದಿಗಳು. ಪ್ರತಿ ವರ್ಷ ನಾಗರಪಂಚಮಿ ಎಂದು ನಾಗರಕಲ್ಲಿಗೆ ತನ್ನಿರೆದರೆ ಸರ್ಪದೋಷ ನಿವಾರಣೆಯಾಗಲಿದೆ ಎಂಬ ನಂಬಿಕೆ ಹಿನ್ನೆಲೆ ನಾಗ ದೇವರಿಗೆ ವಿಶೇಷ ಪೂಜೆ ನೆರವೇರಿತು.
ಕ್ಷೇತ್ರದಲ್ಲಿ ಸಾವಿರಾರು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಹೊರಗೆ ಸುಮಾರು 10 ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.